ADVERTISEMENT

ಆಗಸ್ಟ್‌ ಮೊದಲ ವಾರ ಮಾರುಕಟ್ಟೆಗೆ ಮಾರುತಿ ಎಸ್‌–ಕ್ರಾಸ್‌ ಪೆಟ್ರೋಲ್‌ ಕಾರು

ಶುಕ್ರವಾರದಿಂದ ಮುಂಗಡ ಬುಕ್ಕಿಂಗ್‌ ಆರಂಭ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 11:55 IST
Last Updated 24 ಜುಲೈ 2020, 11:55 IST
ಮಾರುತಿ ಸುಜುಕಿ
ಮಾರುತಿ ಸುಜುಕಿ   

ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಬಹು ನಿರೀಕ್ಷಿತ ‘ಎಸ್‌–ಕ್ರಾಸ್’ ಪೆಟ್ರೋಲ್ ‌‌ಕಾರು ಆಗಸ್ಟ್‌ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರಲಿದೆ. ಕಾರಿನ ಮುಂಗಡ ಬುಕ್ಕಿಂಗ್‌ ಶುಕ್ರವಾರದಿಂದ ಆರಂಭವಾಗಿದೆ.

ನಿರೀಕ್ಷೆ ಹುಟ್ಟು ಹಾಕಿರುವ ಎಸ್‌–ಕ್ರಾಸ್‌ ಪೆಟ್ರೋಲ್ ಆವೃತ್ತಿ ಸಿಗ್ಮಾ, ಡೆಲ್ಟಾ, ಝೇಟಾ ಮತ್ತು ಅಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯ.

ಹೈಬ್ರಿಡ್‌ ತಂತ್ರಜ್ಞಾನದ ಕೆ–ಸೀರೀಸ್‌ ಎಂಜಿನ್ ಪ್ರಮುಖ ಹೈಲೈಟ್‌. ಅಪಘಾತದ ವೇಳೆ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲಾಗಿದೆ.1.5 ಲೀಟರ್ ಸಾಮರ್ಥ್ಯದ ಎಂಜಿನ್‌ ಮತ್ತು ಆಕರ್ಷಕವಿನ್ಯಾಸದ ಕ್ಯಾಬಿನ್‌ನಿಂದಾಗಿ‌ ಮಾರುತಿ ಎಸ್‌–ಕ್ರಾಸ್ ಪೆಟ್ರೋಲ್‌ ಕಾರು ಭಾರಿ ನಿರೀಕ್ಷೆ ಮೂಡಿಸಿದೆ.

ADVERTISEMENT

₹11 ಸಾವಿರ ಪಾವತಿಸಿ ಮಾರುತಿ ನೆಕ್ಸಾ ಷೊ ರೂಂಗಳಲ್ಲಿ ಬುಕ್‌ ಮಾಡಬಹುದು ಎಂದು ಕಂಪನಿ ಹೇಳಿದೆ. 2015ರಲ್ಲಿ ಮಾರುತಿ ಎಸ್‌–ಕ್ರಾಸ್‌ ಡೀಸೆಲ್‌ ಕಾರು ಕೂಡ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.