ADVERTISEMENT

ಆಲ್ಟೊ: 40 ಲಕ್ಷಕ್ಕೂ ಅಧಿಕ ಕಾರುಗಳ ಮಾರಾಟ

ಪಿಟಿಐ
Published 13 ಆಗಸ್ಟ್ 2020, 14:24 IST
Last Updated 13 ಆಗಸ್ಟ್ 2020, 14:24 IST
ಆಲ್ಟೊ
ಆಲ್ಟೊ   

ನವದೆಹಲಿ: ಸಣ್ಣ ಕಾರು ಆಲ್ಟೊ ಮಾರಾಟವು 40 ಲಕ್ಷದ ಮೈಲುಗಲ್ಲನ್ನು ದಾಟಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ಗುರುವಾರ ತಿಳಿಸಿದೆ.

2000ನೇ ಇಸವಿಯ ಸೆಪ್ಟೆಂಬರ್‌ನಲ್ಲಿ ಇದನ್ನು ಮೊದಲಿಗೆ ಬಿಡುಗಡೆ ಮಾಡಲಾಗಿತ್ತು. ಸತತ 16 ವರ್ಷಗಳವರೆಗೆ ದೇಶದಲ್ಲಿ ಅತಿ ಹೆಚ್ಚು ಮಾರಾಟ ಕಂಡ ಕಾರು ಇದಾಗಿದೆ. ಭಾರತದಲ್ಲಿ ಶೇಕಡ 76ರಷ್ಟು ಜನರು ಆಲ್ಟೊವನ್ನು ತಮ್ಮ ಮೊದಲ ಕಾರ್‌ ಆಗಿ ಖರೀದಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

ದೇಶದ ಬೇರೆ ಯಾವುದೇ ಕಾರು ಮಾರಾಟದಲ್ಲಿ ಈ ಮೈಲುಗಲ್ಲು ಸಾಧಿಸಲಾಗಿಲ್ಲ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ. ಈ ಮಾದರಿಯು ಸದ್ಯ, ₹ 2.95 ಲಕ್ಷದಿಂದ ₹ 4.36 ಲಕ್ಷದ ಬೆಲೆಯಲ್ಲಿ (ಎಕ್ಸ್‌ ಷೋರೂಂ) ಲಭ್ಯವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.