ADVERTISEMENT

ಎಂಜಿ ಮೋಟರ್‌: ಎರಡು ವರ್ಷಗಳಲ್ಲಿ ಇನ್ನೊಂದು ‘ಇವಿ’

ಪಿಟಿಐ
Published 27 ಜೂನ್ 2021, 13:55 IST
Last Updated 27 ಜೂನ್ 2021, 13:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ₹ 20 ಲಕ್ಷಕ್ಕಿಂತ ಕಡಿಮೆ ಬೆಲೆಯ ಹೊಸ ವಿದ್ಯುತ್‌ ಚಾಲಿತ ವಾಹನ ಬಿಡುಗಡೆ ಮಾಡುವ ಆಲೋಚನೆ ಹೊಂದಿದೆ ಎಂದು ಕಂಪನಿಯ ಭಾರತದ ಅಧ್ಯಕ್ಷ ರಾಜೀವ್‌ ಛಾಬಾ ಹೇಳಿದ್ದಾರೆ.

ಜೆಡ್‌ಎಸ್ ಎಸ್‌ಯುವಿ ಬಳಿಕ ಎರಡನೇ ವಿದ್ಯುತ್ ಚಾಲಿತ ವಾಹನ ಇದಾಗಿರಲಿದೆ. ಜೆಡ್‌ಎಸ್‌ ಎಕ್ಸ್‌ ಷೋರೂಂ ಬೆಲೆ ₹ 21 ಲಕ್ಷದಿಂದ ₹ 24.18 ಲಕ್ಷದವರೆಗಿದೆ.

ವಿದ್ಯುತ್ ಚಾಲಿತ ವಾಹನಗಳಿಗೆ ಸಂಬಂಧಿಸಿದ ನೀತಿಯ ಕುರಿತು ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ವಿದ್ಯುತ್‌ ಚಾಲಿತ ವಾಹನಗಳ ಮೇಲಿನ ತೆರಿಗೆಯನ್ನು ಈಗಾಗಲೇ ತಗ್ಗಿಸಿದೆ. ಚಾರ್ಜಿಂಗ್‌ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಷ್ಟೇ ಸದ್ಯ ಬೇಕಿರುವುದು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಉದ್ಯಮ ಕೆಲಸ ಮಾಡುತ್ತಿವೆ. ಕೋವಿಡ್‌ ಸ್ಥಿತಿಯು ನಿಯಂತ್ರಣಕ್ಕೆ ಬಂದ ಬಳಿಕ ಅದಕ್ಕೆ ವೇಗ ಸಿಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.