ADVERTISEMENT

ಮನೆಯಲ್ಲೇ ಮಾಡಿ ಸ್ಪಾ ಬಾಡಿ ಪಾಲಿಶ್‌

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 10:35 IST
Last Updated 6 ಜುಲೈ 2020, 10:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಾಳಿ, ಬಿಸಿಲು ಮತ್ತು ಧೂಳಿನಿಂದ ಸುಕ್ಕುಗಟ್ಟಿದ ತ್ವಚೆಗೆ ಕಾಂತಿ ನೀಡಲು ಕೊರೊನಾ ಸೋಂಕು ತಗುಲುವ ಭೀತಿಯ ಹಿನ್ನೆಲೆಯಲ್ಲಿ ಬ್ಯೂಟಿ ಪಾರ್ಲರ್‌, ಸ್ಪಾ ಅಥವಾ ಸಲೂನ್‌ಗಳಿಗೆ ಹೋಗಲು ಜನರು ಭಯಬೀಳುತ್ತಿದ್ದಾರೆ.

ಇಂಥ ಸಮಯದಲ್ಲಿ ಮನೆಯಲ್ಲೇ ಒಂದಿಷ್ಟು ಸಮಯ ಮೀಸಲಿಟ್ಟರೆ, ಚರ್ಮಕ್ಕೆ ಸ್ಪಾ ಗುಣಮಟ್ಟದಆರೈಕೆ ನೀಡಬಹುದು. 15 ದಿನಕ್ಕೊಮ್ಮೆ ಬಾಡಿ ಪಾಲಿಶ್ ಮಾಡಿದರೆ ಸಾಕು ತ್ವಚೆಗೆ ಕಾಂತಿ ಬರುತ್ತದೆ.

ಮನೆಯಲ್ಲಿಯೇ ಬಾಡಿ ಪಾಲಿಶ್ ಹೇಗೆ?

ADVERTISEMENT

ಬಾಡಿ ಪಾಲಿಶ್‌ಗೆ ಮುಖ್ಯವಾಗಿ ಬೇಕಿರುವುದು ಸ್ಕ್ರಬ್‌. ಅದನ್ನು ಮನೆಯಲ್ಲೇ ಲಭ್ಯವಿರುವ ವಸ್ತುಗಳಿಂದ ಸಿದ್ಧಮಾಡಿಕೊಳ್ಳಬಹುದು.

ಓಟ್ಸ್‌, ಶ್ರೀಗಂಧದ ಪುಡಿ, ಗುಲಾಬಿ ಹೂವಿನ ಪುಡಿ, ಹಾಲು, ಮೊಸರು, ಎಳನೀರು, ಜೇನು, ತುಪ್ಪ, ಹೆಸರುಕಾಳಿನ ಪುಡಿ ಎಲ್ಲವನ್ನು ಸೇರಿಸಿ ಪೇಸ್ಟ್‌ ತಯಾರಿಸಿಟ್ಟುಕೊಳ್ಳಿ.

ಬೆಚ್ಚಗಿನ ನೀರಿನಿಂದ ದೇಹವನ್ನು ತೇವ ಮಾಡಿಕೊಂಡು ಸ್ಕ್ರಬ್ ಹಚ್ಚಿ. ನಂತರ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಬೇಕು. ಮಸಾಜ್‌ ಮಾಡಲು ನಿಂಬೆ, ಕಿತ್ತಳೆ ಅಥವಾ ಬಾಳೆಹಣ್ಣಿನ ಸಿಪ್ಪೆ ಬಳಸಬಹುದು. ಸ್ಕ್ರಬ್‌ ಮಿಶ್ರಣವನ್ನು ಹಣ್ಣಿನ ಸಿಪ್ಪೆಯಲ್ಲಿ ತೆಗೆದುಕೊಂಡು ಮಸಾಜ್ ಮಾಡಬೇಕು.

ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡು ಆಲಿವ್ ಅಥವಾ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಬೇಕು. ಬಿಸಿ ನೀರಿನಲ್ಲಿ ಟವಲ್ ಅದ್ದಿ ದೇಹಕ್ಕೆ ಸುತ್ತಿಕೊಂಡು ವಿಶ್ರಾಂತಿ ತೆಗೆದುಕೊಳ್ಳಿ.ಟವಲ್‌ನಲ್ಲಿ ಬಿಸಿಆವಿ ಕಡಿಮೆಯಾದರೆ ಮತ್ತೆ ಬಿಸಿ ನೀರಿನಲ್ಲಿ ಅದ್ದಿಕೊಳ್ಳಿ. ಹೀಗೆ20-25 ನಿಮಿಷ ಬಿಸಿನೀರಿನ ಆವಿ ತೆಗೆದುಕೊಳ್ಳಿ.

ಬಳಿಕ ಉಪ್ಪು ಅಥವಾ ಸಕ್ಕರೆಯಿಂದ ಮೃದುವಾಗಿ ಎರಡು ನಿಮಿಷ ಮಸಾಜ್ ಮಾಡಿ. ಬಿಸಿ ನೀರಿನ ಉಗಿ ತೆಗೆದುಕೊಂಡ ನಂತರ ಉಪ್ಪು ಅಥವಾ ಸಕ್ಕರೆ ಮಸಾಜ್‌ ಮಾಡಿದರೆ ಡೆಡ್‌ಸ್ಕಿನ್‌ ನಿವಾರಣೆಯಾಗುತ್ತದೆ. ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡ ಬಳಿಕ ವಿಟಮಿನ್ ಇ ಎಣ್ಣೆಯಲ್ಲಿ ಸ್ಟ್ರಾಬೆರಿ ಹಣ್ಣು (ಸ್ಟ್ರಾಬೆರಿ ಇಲ್ಲದಿದ್ದರೆ ಕಿತ್ತಳೆ ಹಣ್ಣು ಬಳಸಿ) ಬೆರೆಸಿ ಮಸಾಜ್ ಮಾಡಿಕೊಳ್ಳಬೇಕು.ಇದನ್ನು 15 ನಿಮಿಷ ಬಿಡಿ.

ತ್ವಚೆಗೆ ಹೊಳಪು ನೀಡಲು ಹಣ್ಣಿನ ಪ್ಯಾಕ್‌ ತುಂಬಾ ಪರಿಣಾಮಕಾರಿ ವಿಧಾನ.ಎಲ್ಲಾ ಮುಗಿದ ಮೇಲೆ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಚರ್ಮ ಮತ್ತು ಮನಸ್ಸು, ಎರಡೂ ರಿಲ್ಯಾಕ್ಸ್ ಆಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.