ADVERTISEMENT

‘ಕೋವಿಡ್ ಲಸಿಕೆ: 23 ಗ್ರಾಮಗಳಲ್ಲಿ ಮೊದಲ ಡೋಸ್ ಪೂರ್ಣ’; ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 14:12 IST
Last Updated 8 ಸೆಪ್ಟೆಂಬರ್ 2021, 14:12 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಗ್ರಾಮೀಣ ವಿಧಾನಸಭಾ ಕ್ಷೇತ್ರದ 23 ಗ್ರಾಮಗಳಲ್ಲಿ ನೂರಕ್ಕೆ ನೂರರಷ್ಟು ಮಂದಿಗೆ (ಅರ್ಹರೆಲ್ಲರಿಗೂ) ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡುವ ಕಾರ್ಯ ಪೂರ್ಣಗೊಂಡಿದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದ್ದಾರೆ.

‘ಬೆಳಗುಂದಿ, ಬೋಕನೂರು, ಬೆಳವಟ್ಟಿ, ಬಡಸ್, ಬಕನೂರು, ಗಣೇಶಪುರ, ಜ್ಯೋತಿನಗರ, ಸೋನೋಳಿ, ಎಳೆಬೈಲ್, ರಕ್ಕಸಕೊಪ್ಪ, ದಾಮಣೆ, ಉಚಗಾಂವ, ಕೋನೇವಾಡಿ, ಬೆಕ್ಕಿನಕೇರಿ, ಬಸುರ್ತೆ, ಕಲ್ಲೇಹೊಳ, ಅಂಬೇವಾಡಿ, ಸುಳಗಾ, ಕುದ್ರೇಮನಿ, ಮುತಗಾ, ಸಾಂಬ್ರಾ, ಹಂದಿಗನೂರು, ಅಲತಗಾ, ಬೆಂಡಿಗೇರಿ, ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಲಾರಕೊಪ್ಪ, ಮಾಸ್ತಮರಡಿ ಗ್ರಾಮಗಳಲ್ಲಿ ಶೇ.100ರಷ್ಟು ಮೊದಲ ಡೋಸ್ ಲಸಿಕಾಕರಣವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಇನ್ನುಳಿದ ಗ್ರಾಮಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕಾಕರಣವಾಗಿದೆ. ಆ ಎಲ್ಲ ಗ್ರಾಮಗಳಲ್ಲಿ ಇನ್ನು ಒಂದೆರಡು ವಾರದಲ್ಲಿ ಸಂಪೂರ್ಣ ಗುರಿ ತಲುಪಲಾಗುವುದು. ಕ್ಷೇತ್ರದ ವ್ಯಾಪ್ತಿಯಲ್ಲಿ 2ನೇ ಡೋಸ್ ಕೂಡ ಶೇ.26ಕ್ಕಿಂತ ಹೆಚ್ಚಾಗಿದೆ. 84 ದಿನ ಪೂರ್ಣವಾಗುತ್ತಿದ್ದಂತೆ ಎಲ್ಲರಿಗೂ 2ನೇ ಡೋಸ್ ಲಸಿಕೆ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.