ADVERTISEMENT

ಅಸಮಾನತೆಯ ಆಯಾಮ ತೆರೆದಿಡುವ ಕೃತಿ: ಡಿ.ರಾಜಶೇಖರ್‌

​ಪ್ರಜಾವಾಣಿ ವಾರ್ತೆ
Published 14 ಮೇ 2022, 19:56 IST
Last Updated 14 ಮೇ 2022, 19:56 IST
ನಿವೃತ್ತ ಐಎಎಸ್‌ ಅಧಿಕಾರಿ ಕೆ.ಜೈರಾಜ್ (ಬಲದಿಂದ ಎರಡನೇಯವರು) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಪಿಎಸಿ ನಿರ್ದೇಶಕ ಜಿ.ಗುರುಚರಣ್‌, ಎನ್‌ಐಎಎಸ್‌ ನಿರ್ದೇಶಕ ಶೈಲೇಶ್‌ ನಾಯಕ್‌, ಪುಸ್ತಕ ಸಂಪಾದನೆ ಮಾಡಿರುವ ಪ್ರೊ.ನರೇಂದ್ರ ಪಾಣಿ ಹಾಗೂ ಐಎಸ್‌ಇಸಿ ನಿರ್ದೇಶಕ ಡಿ.ರಾಜಶೇಖರ್‌ ಇದ್ದರು–ಪ್ರಜಾವಾಣಿ ಚಿತ್ರ   
ನಿವೃತ್ತ ಐಎಎಸ್‌ ಅಧಿಕಾರಿ ಕೆ.ಜೈರಾಜ್ (ಬಲದಿಂದ ಎರಡನೇಯವರು) ಪುಸ್ತಕ ಬಿಡುಗಡೆ ಮಾಡಿದರು. (ಎಡದಿಂದ) ಪಿಎಸಿ ನಿರ್ದೇಶಕ ಜಿ.ಗುರುಚರಣ್‌, ಎನ್‌ಐಎಎಸ್‌ ನಿರ್ದೇಶಕ ಶೈಲೇಶ್‌ ನಾಯಕ್‌, ಪುಸ್ತಕ ಸಂಪಾದನೆ ಮಾಡಿರುವ ಪ್ರೊ.ನರೇಂದ್ರ ಪಾಣಿ ಹಾಗೂ ಐಎಸ್‌ಇಸಿ ನಿರ್ದೇಶಕ ಡಿ.ರಾಜಶೇಖರ್‌ ಇದ್ದರು–ಪ್ರಜಾವಾಣಿ ಚಿತ್ರ      

ಬೆಂಗಳೂರು: ‘ಪ್ರೊ.ನರೇಂದ್ರ ಪಾಣಿ ಸಂಪಾದನೆ ಮಾಡಿರುವ ‘ಡೈನಾಮಿಕ್ಸ್‌ ಆಫ್‌ ಡಿಫರೆನ್ಸ್’ ಕೃತಿಯು ಅಸಮಾನತೆಯ ವಿವಿಧ ಆಯಾಮಗಳ ಕುರಿತು ಮಾತನಾಡುತ್ತದೆ’ ಎಂದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಎಸ್‌ಇಸಿ) ನಿರ್ದೇಶಕ ಡಿ.ರಾಜಶೇಖರ್‌ ಅಭಿಪ್ರಾಯಪಟ್ಟರು.

ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ (ಪಿಎಸಿ) ಹಾಗೂ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌ (ಎನ್‌ಐಎಎಸ್‌) ಶನಿವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುಸ್ತಕವು ಒಟ್ಟು ಐದು ಅಧ್ಯಾಯಗಳನ್ನು ಒಳಗೊಂಡಿದೆ. 5 ವರ್ಷದೊಳಗಿನ ಶೇ 36ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹಾಗೂ ಶೇ 32ರಷ್ಟು ಮಕ್ಕಳು ಕಡಿಮೆ ತೂಕದ ಸಮಸ್ಯೆಯಿಂದ ಬಳಲುತ್ತಿದ್ದು, 2019 ಮತ್ತು 2021ರಲ್ಲಿ ನಡೆಸಲಾಗಿದ್ದ ಒಟ್ಟು ಐದು ಸಮೀಕ್ಷೆಗಳಿಂದ ದೃಢಪಟ್ಟಿತ್ತು. ಇದು ಗ್ರಾಮೀಣ ಭಾರತದಲ್ಲಿನ ಅಸಮಾನತೆಯನ್ನು ಬಿಂಬಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಗ್ರಾಮೀಣ ಭಾಗದಲ್ಲಿನ ಅಸಮಾನತೆಯ ಮೇಲೆ ಈ ಪುಸ್ತಕವು ಬೆಳಕು ಚೆಲ್ಲುತ್ತದೆ. ಸಮೀಕ್ಷೆಯ ಆಧಾರದಲ್ಲಿ ಇದನ್ನು ಪ್ರತಿಪಾದಿಸಲಾಗಿದೆ. ಪುಸ್ತಕದ ಅಧ್ಯಾಯವೊಂದರಲ್ಲಿ ಶಿಕ್ಷಣ, ಆರೋಗ್ಯ, ಜಾತಿ ಸೇರಿದಂತೆ ವಿವಿಧ ವಿಷಯಗಳಲ್ಲಿನ ಅಸಮಾನತೆ ಹಾಗೂ ಅದರ ಅಪಾಯದ ಕುರಿತು ಚರ್ಚಿಸಲಾಗಿದೆ. ಸಾಹಿತ್ಯ ಲೋಕಕ್ಕೆ ಇದೊಂದು ಅಮೂಲ್ಯ ಗ್ರಂಥ. ಇದು ಕಾಲೇಜುಗಳಲ್ಲಿ ಬೋಧಿಸಲು ಯೋಗ್ಯವಾದ ಕೃತಿಯಾಗಿದೆ’ ಎಂದು ಹೇಳಿದರು.

ಪುಸ್ತಕ ಸಂಪಾದನೆ ಮಾಡಿರುವ ಪ್ರೊ.ನರೇಂದ್ರ ಪಾಣಿ, ‘ಅಸಮಾನತೆ ಪ್ರಕ್ರಿಯೆ, ರೂಪಾಂತರ ಪ್ರಕ್ರಿಯೆ, ದುರ್ಬಲತೆ ಹಾಗೂ ವಿಮೋಚನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಇದರಲ್ಲಿ ಚರ್ಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.