
ಮೂಡಿಗೆರೆ: ರಾಜ್ಯದ ನಾನಾ ಭಾಗಗಳಿಂದ ಮೂಡಿಗೆ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಿದ ಪಾದಯಾತ್ರಿಗಳಿಗೆ ಮೂಡಿಗೆರೆ ಸಮಾಜ ಸೇವಾ ಸಂಘದ ವತಿಯಿಂದ 5ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಲಾಯಿತು.
ತಾಲ್ಲೂಕಿನ ನೀರುಗಂಡಿ ಗ್ರಾಮದ ಬಳಿ ಎಸ್‌ಎಲ್‌ಆರ್ ಕಾಫಿ ಕ್ಯೂರಿಂಗ್ ಆವರಣದಲ್ಲಿ ಸಾವಿರಾರು ಮಂದಿ ಪಾದಯಾತ್ರಿಗಳು ಉಳಿದುಕೊಳ್ಳವಷ್ಟು ಶಾಮಿಯಾನ ವ್ಯವಸ್ಥೆಯನ್ನು ಕಲ್ಪಿಸಿ, ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಿ ವಿಶ್ರಾಂತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ನಾಲ್ಕು ದಿನಗಳ ಕಾಲ ಹಗಲಿರುಳು ನಡೆದ ಈ ಸೇವಾ ಕಾರ್ಯದಲ್ಲಿ, ಪಾದಯಾತ್ರಿಗಳಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ, ಅನ್ನ ದಾಸೋಹವನ್ನು ನಿರಂತರವಾಗಿ ನಡೆಸಲಾಯಿತು.
ತುಮಕೂರಿನ ಸದ್ದೀಕ್ಷ ಚಾರಿಟಬಲ್ ಸಂಸ್ಥೆ ವತಿಯಿಂದ ಪಾದಯಾತ್ರಿಗಳಿಗೆ ಆಯುರ್ವೇದಿಕ್ ಚಿಕಿತ್ಸೆ ಕೂಡ ನೀಡಲಾಯಿತು. ಸಮಿತಿಯ ಪದಾಧಿಕಾರಿಗಳು, ಸೇವಕರು ಭಾಗವಹಿಸಿ ಹಗಲಿರುಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.