ಪ್ರಜಾವಾಣಿ ವಾರ್ತೆ
ದಾವಣಗೆರೆ: ನಗರದ ವಿವಿಧ ಬಡಾವಣೆಗಳಲ್ಲಿ ಬೈಕ್ ಕಳ್ಳತನ ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ಆತನಿಂದ ₹ 1.05 ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಡಾವಣೆ ಠಾಣೆಯ ಪಿಎಸ್‌ಐ ಚಿದಾನಂದಪ್ಪ ಅವರು ರೈಲ್ವೆ ಸ್ಟೇಷನ್ ಮುಂಭಾಗ ಗಸ್ತಿನಲ್ಲಿದ್ದ ವೇಳೆ ಈ ಬಾಲಕ ಬೈಕ್‌ನಲ್ಲಿ ಬಂದಿದ್ದ. ಆತನನ್ನು ವಿಚಾರಿಸಿದಾಗ ಸಮಂಜಸ ಉತ್ತರ ನೀಡಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೆಲವು ತಿಂಗಳಿಂದ ನಗರದ ಪಿ.ಜೆ. ಬಡಾವಣೆ, ಗುಂಡಿ ಸರ್ಕಲ್ , ಎಂಸಿಸಿ ‘ಎ’ ಬ್ಲಾಕ್ , ಕೆ.ಬಿ ಬಡಾವಣೆಗಳಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಡಾವಣೆ ಠಾಣೆಯಲ್ಲಿ 4 ಹಾಗೂ ಕೆಟಿಜೆ ನಗರ ಠಾಣೆಯಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ 5 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಡಿವೈಎಸ್‌ಪಿ ನಾಗೇಶ್ ಐತಾಳ್ ಮಾರ್ಗದರ್ಶನದಲ್ಲಿ ಬಡಾವಣೆ ಠಾಣೆಯ ಪಿಎಸ್ಐ ಸುರೇಶ್ ಸಗರಿ ನೇತೃತ್ವದಲ್ಲಿ ಪಿಎಸ್‌ಐ ಅರವಿಂದ ಬಿ.ಎಸ್, ಹರೀಶ್ ರೆಡ್ಡಿ, ಸಿದ್ದೇಶ್, ಅರುಣಕುಮಾರ್, ಸೈಯದ್ ಅಲಿ, ವಿಶಾಲಾಕ್ಷಿ, ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.