ADVERTISEMENT

ಗುಡಿಸಲಿಗೆ ಬೆಂಕಿ: ದ್ವೇಷದ ಶಂಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:34 IST
Last Updated 19 ಸೆಪ್ಟೆಂಬರ್ 2021, 4:34 IST
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಕೊಂಡ್ಲಿಕ್ರಾಸ್ ಬಳಿಯ ಎಮ್ಮೆದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬ
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಕೊಂಡ್ಲಿಕ್ರಾಸ್ ಬಳಿಯ ಎಮ್ಮೆದೊಡ್ಡಿ ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬ   

ಪ್ರಜಾವಾಣಿ ವಾರ್ತೆ

ಗುಬ್ಬಿ: ನಿಟ್ಟೂರು ಹೋಬಳಿ ಕೊಂಡ್ಲಿ ಕ್ರಾಸ್ ಬಳಿಯ ಎಮ್ಮೆದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಪರಿಶಿಷ್ಟ ಜಾತಿ ವಾಸಿಸುತ್ತಿದ್ದ ಗುಡಿಸಲು ಬೆಂಕಿಗೆ ಆಹುತಿಯಾಗಿದೆ.

‘ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿಲ್ಲ. ಇದೊಂದು ಉದದೇಶಪೂರ್ವಕ ಕೃತ್ಯ. ವೈಯಕ್ತಿಕ ದ್ವೇಷದಿಂದಾಗಿ ಮೇಲ್ಜಾತಿಯವರು ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ’ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ADVERTISEMENT

ಗುಡಿಸಲಿನಲ್ಲಿದ್ದ ಆಹಾರಧಾನ್ಯ, ಬಟ್ಟೆ, ಬೆಲೆಬಾಳುವ ವಸ್ತು, ಅಡಿಕೆ, ಕೊಬ್ಬರಿ ಜೊತೆಗೆ ಸಮೀಪದಲ್ಲಿದ್ದ ಅಡಿಕೆ ಮರಗಳೂ ಸುಟ್ಟುಹೋಗಿವೆ.

‘ಮೇಲ್ಜಾತಿಯವರಿಗೆ ಸೇರಿದ ತೋಟದಲ್ಲಿ ಪರಿಶಿಷ್ಟ ಜಾತಿಯ ಶ್ರೀನಿವಾಸ್‌ ಅವರು ಬಾಳೆಗೊನೆ ಕಡಿದಿದ್ದಾರೆ ಎಂದು ಆಪಾದಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಶ್ರೀನಿವಾಸ್‌ ಅವರ ಅಣ್ಣ ವೆಂಕಟೇಶಪ್ಪ, ಅವರ ಹೆಂಡತಿ ಲಕ್ಷ್ಮೀದೇವಮ್ಮ ಹಾಗೂ ತಂದೆ ಗಂಗಯ್ಯ ಅವರ ಮೇಲೆ ಹಲ್ಲೆ ನಡೆಸಿ, ಗುಡಿಸಲಿಗೆ ಬೆಂಕಿ ಹಚ್ಚಲಾಗಿದೆ’ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.