ADVERTISEMENT

ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಅಭಿಯಾನ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 15:46 IST
Last Updated 29 ಮಾರ್ಚ್ 2021, 15:46 IST
ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಶಾಸಕ ಕೆ. ರಘುಪತಿ ಭಟ್ ಕೋವಿಡ್‌ ಲಸಿಕಾ ಅಭಿಯಾನದ ಕೇಂದ್ರ ಉದ್ಘಾಟಿಸಿದರು.
ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಶಾಸಕ ಕೆ. ರಘುಪತಿ ಭಟ್ ಕೋವಿಡ್‌ ಲಸಿಕಾ ಅಭಿಯಾನದ ಕೇಂದ್ರ ಉದ್ಘಾಟಿಸಿದರು.   

ಉಡುಪಿ: ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಶಾಸಕ ಕೆ. ರಘುಪತಿ ಭಟ್ ಕೋವಿಡ್‌ ಲಸಿಕಾ ಅಭಿಯಾನದ ಕೇಂದ್ರ ಉದ್ಘಾಟಿಸಿದರು.

ಬಳಿಕ ಮಾತನಾಡಿ ಕೋವಿಡ್ ಲಸಿಕೆ ತೆಗೆದು ಕೊಳ್ಳಲು ಬರುವ ಸಾರ್ವಜನಿಕರ ಸಂಪೂರ್ಣ ಕಾಳಜಿಯನ್ನು ಕೇಂದ್ರದ ಸಿಬ್ಬಂದಿ ನೋಡಿಕೊಳ್ಳಲಿದ್ದಾರೆ. ಜತೆಗೆ ಅವಶ್ಯಕ ಮಾಹಿತಿಗಳನ್ನು ನೀಡಲಿದ್ದಾರೆ ಎಂದರು.

ಮಾಹಿತಿ ಕೇಂದ್ರದ ಪ್ರಧಾನ ಸಂಯೋಜಕ ಮಹೇಶ್ ಠಾಕೂರ್ ಮಾತನಾಡಿ ಮಾಹಿತಿ ಕೇಂದ್ರವು ಕೋವಿಡ್ ಲಸಿಕಾ ಅಭಿಯಾನ ಚಾಲನೆಯಲ್ಲಿ ಇರುವವರೆಗೂ ಸಕ್ರಿಯವಾಗಿರಲಿದ್ದು, ಉಚಿತ ವಾಹನ ಸೇವೆ ಕೂಡ ಲಭ್ಯವಿದೆ. ಲಸಿಕೆ ತೆಗೆದು ಕೊಳ್ಳಲು ಬರುವ ಸಾರ್ವಜನಿಕರು ಇದರ ಉಪಯೋಗ ಪಡೆದು ಕೊಳ್ಳಬಹುದು. 9845321507 ಮೊಬೈಲ್ ನಂಬರ್‌ ಸಂಪರ್ಕಿಸಿ ವಾಹನ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.

ADVERTISEMENT

ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರಸಭಾ ಸದಸ್ಯೆ ರಶ್ಮಿ ಭಟ್, ನಗರ ಪ್ರದಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಮತ್ತು ದಿನೇಶ್ ಅಮೀನ್, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ವೈದ್ಯಾಧಿಕಾರಿಗಳಾದ ಡಾ, ಚಂದ್ರಶೇಖರ್ ಅಡಿಗ, ಡಾ, ವೇಣುಗೋಪಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.