
ಪ್ರಜಾವಾಣಿ ವಾರ್ತೆಉಡುಪಿ: ಸೋಮವಾರ ಜಿಲ್ಲೆಯಲ್ಲಿ 71 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, ಸೋಂಕಿತರಲ್ಲಿ 45 ಪುರುಷರು 26 ಮಹಿಳೆಯರು ಇದ್ದಾರೆ. 71 ಸೋಂಕಿತ ಪ್ರಕರಣಗಳಲ್ಲಿ 41 ಮಂದಿ ಎಂಐಟಿ ಕ್ಯಾಂಪಸ್ನಲ್ಲಿ ದೃಢಪಟ್ಟಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಉಡುಪಿಯ 53, ಕುಂದಾಪುರದ 13, ಹಾಗೂ ಕಾರ್ಕಳದ ಐವರಲ್ಲಿ ಸೋಂಕು ಪತ್ತೆಯಾಗಿದೆ. 66 ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಐವರು ಹೋಂ ಐಸೊಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ 116 ಸೇರಿ ಇದುವರೆಗೂ 24162 ಮಂದಿ ಗುಣಮುಖರಾಗಿದ್ದು, 779 ಸಕ್ರಿಯ ಸೋಂಕಿತರು ಇದ್ದಾರೆ. 191 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ 1,02,671 ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದು, 83,949 ಮೊದಲ ಡೋಸ್, 18,772 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.