ADVERTISEMENT

ಎಸ್‌ಡಿಎ ಸಾಮಾನ್ಯ ಕನ್ನಡ ಪರೀಕ್ಷೆ ಮಾದರಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 19:30 IST
Last Updated 15 ಸೆಪ್ಟೆಂಬರ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಭಾಗ– 3

ಕರ್ನಾಟಕ ಲೋಕಸೇವಾ ಆಯೋಗವು ಇದೇ 18ರಂದು ನಡೆಸಲಿರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯ ಕಡ್ಡಾಯ ಭಾಷಾ ಕನ್ನಡ ಪತ್ರಿಕೆಯ ಮಾದರಿ ಪ್ರಶ್ನೆಗಳು ಇಲ್ಲಿವೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

ADVERTISEMENT

1) ಇವುಗಳನ್ನು ಗಮನಿಸಿ

1) ಅನುಪ್ರಾಸ 2) ಯಮಕ 3) ಚಿತ್ರಕವಿತ್ವ

ಈ ಕೆಳಗಿನ ಯಾವುದರಲ್ಲಿ ಕಾಣಬಹುದು?

ಎ) ಅರ್ಥಾಲಂಕಾರ

ಬಿ) ಶಬ್ದಾಲಂಕಾರ

ಸಿ) ಉಪಮಾಲಂಕಾರ

ಡಿ) ಯಾವುದರಲ್ಲಿಯೂ ಅಲ್ಲ

2) ‘ಏರು’ ಎಂದರೆ ಹತ್ತು ಎಂದರ್ಥ ಹಾಗಾದರೆ ‘ಏಱ’ ಎಂದರೆ...........

ಎ) ಗಾಯ

ಬಿ) ಪ್ರಾರ್ಥನೆ

ಸಿ) ಕತ್ತರಿಸಿ ಬಿಸಾಡು

ಡಿ) ಕೆಳಗೆ ಬೀಳು

3) ಕನ್ನಡ ಪದದೊಡನೆ ಸಂಸ್ಕೃತ ಪದ ಸೇರಿಸಿ ಸಮಾಸ ಮಾಡಿದರೆ ಅದನ್ನು ಯಾವ ಸಮಾಸ ಎನ್ನುತ್ತಾರೆ?

ಎ) ಕರ್ಮಧಾರೆಯ ಸಮಾಸ

ಬಿ) ತತ್ಪುರುಷ ಸಮಾಸ

ಸಿ) ಅರಿ ಸಮಾಸ

ಡಿ) ಗಮಕ ಸಮಾಸ

4) ‘ಪಾಲಿ ಸಂಸ್ಕೃತ ಮತ್ತು ಕನ್ನಡ ಶಾಸನಗಳು’ ಎಂಬ ಕೃತಿ ಬರೆದವರು ಮತ್ತು ಕೆಲವು ಕನ್ನಡ ಲಾವಣಿಗಳನ್ನು ಸಂಗ್ರಹಿಸಿ ಇಂಗ್ಲಿಷ್ ಅನುವಾದದೊಡನೆ ಪ್ರಕಟಿಸಿದವರು, ಭಾರತೀಯ ಶಾಸನ ಶಾಸ್ತ್ರ ಪಿತಾಮಹರೆಂದು ಕರೆಸಿಕೊಂಡ ಇಂಗ್ಲಿಷ್ ಅಧಿಕಾರಿ ಯಾರು?

ಎ) ಕಿಟೆಲ್

ಬಿ) ಇ. ಪಿ. ರೈಸ್‌

ಸಿ) ಜೆ.ಎಫ್. ಫ್ಲೀಟ್

ಡಿ) ಬಿ. ಎಲ್. ರೈಸ್

5) ‘ಕೂಷ್ಮಾಂಡ’ ಇದರ ತದ್ಭವ ರೂಪವನ್ನು ತಿಳಿಸಿ.

ಎ) ಸಗ್ಗ

ಬಿ) ಕಂಬಳ

ಸಿ) ಕುಂಬಳ

ಡಿ) ಕೋಳಿ

6) ಇವುಗಳಲ್ಲಿ ಕೇವಲ ವ್ಯಂಜನ ಮಾತ್ರ ಇರುವ ಗುಂಪನ್ನು ಆರಿಸಿ

ಎ) ಅ, ಚ್, ಛ್, ಡ್

ಬಿ) ದ್, ಪ್, ಬ್, ಅಃ

ಸಿ) ಯ್, ಏ, ಈ, ಮ್

ಡಿ) ತ್, ಗ್, ಟ್, ಖ್

7) ‘ಶಬ್ದಾರ್ಥೌ ಸಹಿತೌ ಕಾವ್ಯಂ’ ಎಂದು ಪ್ರತಿಪಾದಿಸಿದವನು ಯಾರು ?

ಎ) ಭಾಮಹ

ಬಿ) ವಾಮನ

ಸಿ) ದಂಡಿ

ಡಿ) ಕುಂತಕ

8) ‘ಕಾವ್ಯ ಶೋಭಾಕರಾನ್ ಧರ್ಮಾವಲಂಕಾರಾನ್ ಪ್ರಚಕ್ಷತೇ’ ಎಂದ ಅಲಂಕಾರಿಕ ಯಾರು ?

ಎ) ವಿಶ್ವನಾಥ

ಬಿ) ವಾಮನ

ಸಿ) ದಂಡಿ

ಡಿ) ಭಾಮಹ

9) ‘ದೋಸ್ತ್’ ಇದು ಯಾವ ಭಾಷೆಯ ಮೂಲ ಶಬ್ದವಾಗಿದೆ?

ಎ) ಮರಾಠಿ

ಬಿ) ಪೋರ್ಚುಗೀಸ್

ಸಿ) ಸಂಸ್ಕೃತ

ಡಿ) ಅರೇಬಿಕ್

10) ಎಸ್.ವಿ. ಪರಮೇಶ್ವರ ಭಟ್ಟರು ಸಂಸ್ಕೃತದ ಈ ಕೆಳಗಿನ ಯಾವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ?

ಎ) ಕಾಳಿದಾಸನ ಮಹಾಸಂಪುಟ

ಬಿ) ಬಾಣನ ಕೃತಿಗಳು

ಸಿ) ಭವಭೂತಿಯ ಸಂಪುಟ

ಡಿ) ಯಾವುದೂ ಅಲ್ಲ

11) ‘ಯತಿ’ ಎಂದರೆ.......................

ಎ) ಪದ್ಯವನ್ನು ಓದುವಾಗ ಅರ್ಥಸ್ಫೂರ್ತಿ ಕೆಡದಂತೆ ಪದ್ಯಪಾದದಲ್ಲಿ ನಿಯತವಾದ ಒಂದೆಡೆಯಲ್ಲಿ ನಿಲ್ಲಿಸುವುದು.

ಬಿ) ನಾಟ್ಯವಾಡುವಾಗ ನಿಲ್ಲದೇ ಕುಣಿಯುವುದು.

ಸಿ) ಹಾಸ್ಯಗಾರನ ಹಾಸ್ಯದ ಹೊನಲನ್ನು ಎಡಬಿಡದೇ ಅನುಭವಿಸುವುದು

ಡಿ) ದೇವರ ಧ್ಯಾನವನ್ನು ಮಾಡುವುದು

12) ‘ಲಕ್ಷ್ಮಣನು ಮರವನ್ನು ಕಡಿದನು’ ಈ ವಾಕ್ಯದಲ್ಲಿ ಕರ್ತೃಪದ ಯಾವುದು?

ಎ) ಲಕ್ಷ್ಮಣ

ಬಿ) ಮರ

ಸಿ) ಕಡಿದನು

ಡಿ) ಮೇಲಿನ ಯಾವುದೂ ಅಲ್ಲ

13) ‘ರಾಮನು ಚೆಂಡನ್ನು ಎಸೆದನು’ ಎಂಬ ವಾಕ್ಯದಲ್ಲಿ ಬರುವ ಮೂರು ಪದಗಳ ಪೈಕಿ ಮೊದಲ ಪದವು ಯಾವ ವಿಭಕ್ತಿ ಪ್ರತ್ಯಯವನ್ನು ಒಳಗೊಂಡಿದೆ?

ಎ) ಪ್ರಥಮ ವಿಭಕ್ತಿ

ಬಿ) ದ್ವಿತೀಯ ವಿಭಕ್ತಿ

ಸಿ) ಷಷ್ಠಿ ವಿಭಕ್ತಿ

ಡಿ) ಸಂಬೋಧನಾ ವಿಭಕ್ತಿ

ಉತ್ತರ: 1)ಬಿ 2)ಎ 3)ಸಿ 4)ಸಿ 5)ಸಿ 6)ಡಿ 7)ಎ 8)ಸಿ 9)ಡಿ 10)ಎ 11)ಎ 12)ಎ 13)ಎ

ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಸಮಾನವಾದ ಅಂಶವಿರುವ ಮೂರು ಪದಗಳಿವೆ, ಭಿನ್ನವಾಗಿರುವ ಒಂದು ಪದವಿದೆ ಅದನ್ನು ಗುರುತಿಸಿ

1) ಎ) ಅಕ್ಕಿ

ಬಿ) ಗೋಧಿ

ಸಿ) ಕಡಲೆ

ಡಿ) ಸಕ್ಕರೆ

2) ಎ) ವೈದೇಹಿ

ಬಿ) ಚನ್ನವೀರ ಕಣವಿ

ಸಿ) ಅನುಪಮಾ

ಡಿ) ಜೇಡರ ದಾಸಿಮಯ್ಯ

3) ಎ) ಮಹಾತ್ಮ ಗಾಂಧಿ

ಬಿ) ಆರ್ಯಭಟ

ಸಿ) ವಿವೇಕಾನಂದ

ಡಿ) ಎಸ್. ರಾಧಾಕೃಷ್ಣ

4) ಎ) ಧನ

ಬಿ) ದನ

ಸಿ) ಎಮ್ಮೆ

ಡಿ) ಕೊಟ್ಟಿಗೆ

5) ಎ) ವಿಶ್ವ

ಬಿ) ಗ್ರಹ

ಸಿ) ಗೃಹ

ಡಿ) ನಕ್ಷತ್ರ

6) ಎ) ರಾಮ

ಬಿ) ಬಲಿ

ಸಿ) ಪರಶುರಾಮ

ಡಿ) ಕೃಷ್ಣ

7) ಎ) ಅಗಸ

ಬಿ) ಆಕಾಶ

ಸಿ) ಅರಸ

ಡಿ) ಸೇವಕ

ಉತ್ತರ: 1)ಡಿ 2)ಡಿ 3)ಬಿ 4)ಎ 5)ಸಿ 6)ಬಿ 7)ಬಿ

ಈ ಗಾದೆಗಳ ಅರ್ಥವನ್ನು ಗ್ರಹಿಸಿ, ಕೇಳಲಾದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಗುರುತಿಸಿ

1) ‘ಮಾತೇ ಮುತ್ತು ಮಾತೇ ಮೃತ್ಯು’

ಎ) ಮಾತು ಸಹಜವಾಗಿರಬೇಕು ಕೃತಕತೆ ಇರಬಾರದು

ಬಿ) ಮಾತು ಸಿಡಿಲಾದರೂ ಗುಡುಗು ಇರಬಾರದು

ಸಿ) ಅಹಿತಕರ ಮಾತು ಅನರ್ಥಕ್ಕೆ ಕಾರಣ

ಡಿ) ಹಿತ ಮಿತವಾದ ಮಾತಿನಿಂದ ದೂರದ ಪ್ರಯಾಣ ಸಹಜವಾಗಿ ಮಾಡಬಹುದು

2) ‘ಗಾಳಿ ಬಂದಾಗ ತೂರಿಕೊ’ ಎಂದರೆ

ಎ) ತಾನಾಗಿ ಬಂದ ಸುಖ, ಸಂಪತ್ತನ್ನು ದೂರ ಮಾಡಬೇಡ

ಬಿ) ಅವಕಾಶ ಒದಗಿದಾಗ ಕಾರ್ಯ ಸಾಧನೆ ಮಾಡು

ಸಿ) ಕಾಲ ನಮಗಾಗಿ ಕಾಯುವುದಿಲ್ಲ

ಡಿ) ನಾವು ಸಮಯವನ್ನು ಕಾಯುವುದು ಲೇಸು

3) ‘ಕೈ ಕೆಸರಾದರೆ ಬಾಯಿ ಮೊಸರು’ ಎಂದರೆ

ಎ) ಕೈ ಕೊಳೆಯಾದರೆ ಮಾತ್ರ ಹಾಲು, ಮೊಸರು ಸಿಗುತ್ತದೆ

ಬಿ) ಕಷ್ಟಪಟ್ಟು ದುಡಿದರೆ ಸುಖ ತನ್ನಿಂದ ತಾನೇ ಬರುತ್ತದೆ.

ಸಿ) ಕಷ್ಟಪಟ್ಟಾಗ ಸುಖ ಅಸಹಜ

ಡಿ) ಕೈಗೆ ಕೆಸರು ಮೆತ್ತಿಕೊಂಡಾಗಲೇ ಮೊಸರು ಸಿಗುತ್ತದೆ.

4) ‘ಆಕಳು ಕಪ್ಪಾದರೆ ಹಾಲು ಕಪ್ಪೇ’ ಎಂದರೆ

ಎ) ಆಕಳು ಕಪ್ಪಾದಷ್ಟು ಹಾಲು ಬೆಳ್ಳಗಿರುತ್ತದೆ.

ಬಿ) ಹೊರ ಜಗತ್ತು ಕಂಡಂತೆ ಒಳ ಜಗತ್ತು ಇರುವುದಿಲ್ಲ.

ಸಿ) ಹೊರಗೆ ಕಪ್ಪಾಗಿ ಕಂಡರೂ ಒಳಗೆ ಖಂಡಿತಾ ಬೆಳ್ಳನೆಯ ವಸ್ತು ಇರುತ್ತದೆ.

ಡಿ) ವ್ಯಕ್ತಿಯ ಬಾಹ್ಯರೂಪ ನೋಡಿ ಅಂತರಂಗ ಅಳೆಯಲು ಸಾಧ್ಯವಿಲ್ಲ.

5) ‘ಮಕ್ಕಳಿಲ್ಲದ ಮನೆ, ಒಕ್ಕಲಿಲ್ಲದ ಊರು ಎಕ್ಕಡಕ್ಕಿಂತಲೂ ಕಡೆ’ ಎಂದರೆ

ಎ) ಮನೆ ಅಭಿವೃದ್ಧಿಗೆ ಸಂತಾನ ಬೇಕು, ಊರಿನ ಅಭಿವೃದ್ಧಿಗೆ ಕೃಷಿ /ಒಕ್ಕಲುತನ ಬೇಕು. ಅವೇ ಇಲ್ಲವೆಂದರೆ ಬೆಲೆ ಸಿಗಲಾರದು.

ಬಿ) ಮಕ್ಕಳಿದ್ದರೆ ಮನೆ ಚೆಂದ ಒಕ್ಕಲಿದ್ದರೆ ಊರು ಚೆನ್ನ ಎಕ್ಕಡವಿದ್ದರೆ ಕಾಲು ಚೆನ್ನಾಗಿರುತ್ತದೆ

ಸಿ) ಮಕ್ಕಳು ಮತ್ತು ಒಕ್ಕಲು ಊರಿನ ಉದಾರತೆಯ ಸಂಕೇತ

ಡಿ) ಯಾವುದೂ ಅಲ್ಲ

6) ‘ಉಂಡದ್ದು ಉಳಿಯದೇ ಹೋದರೂ ಆಡಿದ್ದು ಉಳಿಯುತ್ತದೆ’ ಎಂದರೆ

ಎ) ಊಟ ಮಾಡಿದ್ದು ಜೀರ್ಣವಾಗಿ ಹೋಗಬಹುದು, ಆದರೆ ಆಟವಾಡಿದ್ದು ಮಾತ್ರ ಶಾಶ್ವತವಾಗಿ ನೆನಪಿರುತ್ತದೆ.

ಬಿ) ಮಾತು ಶಾಶ್ವತವಾಗಿರದಿದ್ದರೂ ಊಟ ಶಾಶ್ವತ

ಸಿ) ಊಟ ಶಾಶ್ವತವಾಗಿರದಿದ್ದರೂ ಮಾತು ಶಾಶ್ವತವಾಗಿರುತ್ತದೆ. ಹೀಗಾಗಿ ಮಾತನಾಡುವಾಗ ಎಚ್ಚರವಾಗಿರು.

ಡಿ) ಊಟ ಮತ್ತು ಆಟ ಎಚ್ಚರಿಕೆಯಿಂದ ಮಾಡು

7) ‘ಚಾಡಿ ಮಾತಿಂದ ಚಾವಡಿ ಹಾಳಾಯ್ತು’ ಎಂದರೆ

ಎ) ನಿರ್ಣಯ ನೀಡಬೇಕಾದ ಚಾವಡಿ ಇನ್ನೊಬ್ಬರ ಮಾತು (ಚಾಡಿ ಮಾತು) ಕೇಳಿ ನಿರ್ಣಯ ತೆಗೆದುಕೊಂಡರೆ ಅ ನಿರ್ಣಯವು ಯೋಗ್ಯವಾಗಿರಲಾರದು

ಬಿ) ಬೇರೆಯವರ ಮಾತು ಕೇಳಿ ನಿರ್ಣಯ ನೀಡಿದರೆ ಮನೆತನ ಉದ್ದಾರವಾಗುವುದು ಆದರೆ ಪಂಚಾಯತಿ ಹಾಳಾಗುವುದು

ಸಿ) ಚಾಡಿ ಮಾತು ನಾಡನ್ನೆಲ್ಲ ಉದ್ದಾರ ಮಾಡಿತು ಆದರೆ ಮನೆತನವನ್ನಲ್ಲ

ಡಿ) ಊರಿನ ಒಗ್ಗಟ್ಟು ಮುರಿದು ಉತ್ತಮ ಕಾರ್ಯ ಮಾಡಲು ಸಾಧ್ಯವಿಲ್ಲ

ಉತ್ತರ: 1)ಸಿ 2)ಬಿ 3)ಬಿ 4)ಡಿ 5)ಎ 6)ಸಿ 7)ಎ

ಖಾಲಿ ಜಾಗದಲ್ಲಿರಬೇಕಾದ ಸೂಕ್ತ ಪದವನ್ನು ಸಂಕೇತದ ಮೂಲಕ ಗುರುತಿಸಿ.

ಭಾರತದ ಪಕ್ಕದಲ್ಲಿರುವ (1)..... ಬಾಂಗ್ಲಾದೇಶವಾಗಿದೆ. ಇದನ್ನು ಮೊದಲು ಪೂರ್ವ ಪಾಕಿಸ್ತಾನವೆಂದು ಕರೆಯುತ್ತಿದ್ದರು. ಅಲ್ಲಿ ‘ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ’ಯ ಖಾಲೀದಾ ಜಿಯಾ ಪ್ರಧಾನಿಯಾಗಿದ್ದರು, ಹಾಗೆಯೇ ಅಲ್ಲಿನ ವಿರೋಧ ಪಕ್ಷದ ಪ್ರಮುಖರೂ ಮಹಿಳೆಯೇ ಆಗಿದ್ದಾರೆ. ಬಾಂಗ್ಲಾ ಮತ್ತು ಭಾರತದ ರಾಷ್ಟ್ರಗೀತೆಯನ್ನು ರಚಿಸಿದವರು (2)...... ಎನ್ನುವುದು ವಿಶೇಷ, ಅವರೇ ನಮ್ಮ ಗುರುದೇವ ರವೀದ್ರನಾಥ ಟ್ಯಾಗೋರ್. ಬಾಂಗ್ಲಾದ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾರತದ ಪಾತ್ರ (3).... . ಭಾರತದ ಉಪಖಂಡದಲ್ಲಿ ವ್ಯಾಪಾರದ ಅಭಿವೃದ್ಧಿಯ (4)..... ಸಾರ್ಕ್ ಸಂಘಟನೆಯ ಸ್ಥಾಪನೆಯಲ್ಲಿ ಬಾಂಗ್ಲಾದೇಶದ ಕೊಡುಗೆ ಅಪಾರ. ಇಂತಹ ಬಾಂಗ್ಲಾದಲ್ಲಿ ಐಎಸ್‌ಐ ಪ್ರೇರಿತ ಉಗ್ರವಾದಿಗಳು ಭಾರತದ ವಿರುದ್ಧ ಚಟುವಟಿಕೆಯನ್ನು ಆರಂಭಿಸಿರುವುದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಶಾಂತಿಯ ವಿಷಯಕ್ಕೆ ಸಂಬಂಧಿಸಿದಂತೆ ಆತಂಕವನ್ನು ಉಂಟುಮಾಡಿದೆ.

(1) ಎ) ರಾಜ್ಯವೇ

ಬಿ) ದೇಶವೇ

ಸಿ) ರಾಜಧಾನಿಯೇ

ಡಿ) ಯಾವುದೂ ಅಲ್ಲ

2) ಎ) ಒಬ್ಬರೇ

ಬಿ) ಇಬ್ಬರು

ಸಿ) ಇವರಾರು

ಡಿ) ನಾಲ್ವರು

3) ಎ) ದೊಡ್ಡದು

ಬಿ) ಚಿಕ್ಕದು

ಸಿ) ಸಣ್ಣದು

ಡಿ) ಯಾವುದೂ ಅಲ್ಲ

(4) ಎ) ಸೃಷ್ಟಿಯಿಂದ

ಬಿ) ದೃಷ್ಟಿಯಿಂದ

ಸಿ) ವಿಷಯದಿಂದ

ಡಿ) ವಿಶಾಲವಾಗಿ

ಉತ್ತರ: 1)ಬಿ 2)ಎ 3)ಎ 4)ಬಿ

ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.