ADVERTISEMENT

ಮನಕಲಕುವ ದೃಶ್ಯ: ಆಮ್ಲಜನಕ ಇಲ್ಲದೆ ಪ್ರಾಣ ಬಿಟ್ಟ ನಟ ರಾಹುಲ್‌ ವೋರಾ

​ಪ್ರಜಾವಾಣಿ ವಾರ್ತೆ
Published 11 ಮೇ 2021, 7:14 IST
Last Updated 11 ಮೇ 2021, 7:14 IST
 ರಾಹುಲ್‌ ವೋರಾ
ರಾಹುಲ್‌ ವೋರಾ   

ನವದೆಹಲಿ: ಬಾಲಿವುಡ್‌ ನಟ ಹಾಗೂ ಯುಟ್ಯೂಬರ್‌ ರಾಹುಲ್‌ ವೋರಾ ಕೋವಿಡ್‌ನಿಂದಾಗಿ ಭಾನುವಾರ ನಿಧನರಾದರು. ಅವರು ಆಮ್ಲಜನಕ ಕೊರತೆಯಿಂದ ಮೃತಪಟ್ಟಿರುವ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ರಾಹುಲ್‌ ವೋರಾ ಕೋವಿಡ್‌ ಸೋಂಕು ದೃಢಪಟ್ಟ ಬಳಿಕ ದೆಹಲಿಯ ರಾಜೀವ್‌ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಾವಿಗೂ ಮುನ್ನಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಸಾಯುವುದಕ್ಕೂ ಮುನ್ನ ರಾಹುಲ್‌ ಒಂದು ವಿಡಿಯೊ ಮಾಡಿದ್ದರು. ಅದರಲ್ಲಿ ಆಮ್ಲಜನಕ ಮುಗೀತಾ ಇದೆ, ಬರ್ತಾ ಇಲ್ಲ ಅಂತ ಹೇಳಿದ ಕೆಲವೇ ಕ್ಷಣಗಳಲ್ಲಿ ಅವರು ಪ್ರಾಣ ಬಿಟ್ಟಿದ್ದರು. ನಂತರ ಈ ವಿಡಿಯೊವನ್ನು ಅವರ ಪತ್ನಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಬರಹದ ಕೊನೆಯಲ್ಲಿ ಜೀವನದಲ್ಲಿ ಈ ಸಲ ನಾನು ಸೋತೆ, ಮತ್ತೆ ಹುಟ್ಟಿ ಬರುತ್ತೇನೆ ಎಂದು ಬರೆದುಕೊಂಡಿದ್ದರು. ಹೀಗೆ ಬರೆದ ಕೆಲವೇ ಗಂಟೆಗಳಲ್ಲಿ ರಾಹುಲ್‌ ನಿಧನರಾದರು ಎಂದು ಅವರ ಕುಟುಂಬದವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.