ADVERTISEMENT

ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಮಿದುಳು ನಿಷ್ಕ್ರಿಯ: ಸುನಿಲ್ ಪಾಲ್

ಐಎಎನ್ಎಸ್
Published 18 ಆಗಸ್ಟ್ 2022, 16:26 IST
Last Updated 18 ಆಗಸ್ಟ್ 2022, 16:26 IST
ರಾಜು ಶ್ರೀವಾಸ್ತವ್ ಟ್ವಿಟರ್ ಖಾತೆಯ ಚಿತ್ರ
ರಾಜು ಶ್ರೀವಾಸ್ತವ್ ಟ್ವಿಟರ್ ಖಾತೆಯ ಚಿತ್ರ   

ನವದೆಹಲಿ: ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಅವರ ಸಹ ಹಾಸ್ಯ ಕಲಾವಿದ ಸುನಿಲ್ ಪಾಲ್ ತಿಳಿಸಿದ್ದಾರೆ.

ಆಗಸ್ಟ್ 10ರಂದು ಹೃದಯಾಘಾತದಿಂದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

ಜಿಮ್‌ನ ಥ್ರೆಡ್ ಮಿಲ್‌ನಲ್ಲಿ ರನ್ ಮಾಡುವ ವೇಳೆ ಅವರು ಕುಸಿದು ಬಿದ್ದಿದ್ದರು. ಜಿಮ್ ಟ್ರೇನರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ADVERTISEMENT

‘ದಯವಿಟ್ಟು ರಾಜು ಶ್ರೀವಾಸ್ತವ ಅವರಿಗಾಗಿ ಪ್ರಾರ್ಥಿಸಿ, ಅವರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ವೈದ್ಯರಿಗೂ ಸಹ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಮಿದುಳು ಕಾರ್ಯ ಸ್ಥಗಿತಗೊಳಿದಿದೆ. ದಯವಿಟ್ಟು ರಾಜು ಭಾಯ್‌ಗಾಗಿ ಪ್ರಾರ್ಥಿಸಿ’ ಎಂದು ಸುನಿಲ್ ಪಾಲ್ ವಿಡಿಯೊ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.

ಮೊದ ಮೊದಲು ಬಾಲಿವುಡ್‌ನ ಚಿಕ್ಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಜ ಶ್ರೀವಾಸ್ತವ್, ಬಳಿಕ ತಮ್ಮಪ್ರತಿಭೆ ಮೂಲಕ ದೊಡ್ಡ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿದ್ದರು. 1989ರ ಮೇನೆ ಪ್ಯಾರ್ ಕಿಯಾ, 1993 ಬಾಜಿಗರ್ ಚಿತ್ರದಲ್ಲೂ ಗಮನ ಸೆಳೆದಿದ್ದರು.

1980 ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ಶೋ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಮೊದಲ ಆವೃತ್ತಿ ಮೂಲಕ ಗುರುತಿಸಿಕೊಂಡಿದ್ದ ಅವರು, ಅಂದಿನಿಂದ ಮನರಂಜನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.