
ಹೊಸಪೇಟೆ (ವಿಜಯನಗರ): ‘ಲವ್ 360’ ಚಿತ್ರ ತಂಡವು ಸೋಮವಾರ ನಗರದಲ್ಲಿ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡಿತು.
ತಾಲ್ಲೂಕಿನ ಮರಿಯಮ್ಮನಹಳ್ಳಿಯ ಯುವ ವೈದ್ಯ ಡಾ. ಪ್ರವೀಣ್ ಚಿತ್ರದ ನಾಯಕ. ರಚನಾ ನಾಯಕಿ. ನಿರ್ದೇಶಕ ಶಶಾಂಕ್, ನಿರ್ಮಾಪಕಿ ಡಾ.ಮಂಜುಳಾ, ಡಾ.ಪ್ರದೀಪ್, ಯುವ ಮುಖಂಡ ಸಿದ್ದಾರ್ಥ ಸಿಂಗ್ ಇತರರಿದ್ದರು.
ನಗರದ ವಡಕರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಚಿತ್ರತಂಡದ ಸದಸ್ಯರು, ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತದ ಮೂಲಕ ಡಾ. ಪುನೀತ್ ರಾಜಕುಮಾರ್ ವೃತ್ತದ ವರೆಗೆ ರೋಡ್ ಶೋ ನಡೆಸಿದರು. ನಂತರ ಪುನೀತ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
‘ಪ್ರತಿಯೊಬ್ಬರೂ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು. ಅನಂತರ ಅಲ್ಲಿಂದ ವಿಜಯನಗರ ಕಾಲೇಜಿನ ವರೆಗೆ ರೋಡ್ ಶೋ ನಡೆಸಿದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೆಚ್ಚಿನ ನಟರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ನೂರಾರು ಜನ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.