ADVERTISEMENT

ಫಿಟ್‌ನೆಸ್ ಮಂತ್ರ ಹೇಳಿದ ನಟ ಸುನೀಲ್ ಶೆಟ್ಟಿ

ಐಎಎನ್ಎಸ್
Published 19 ಸೆಪ್ಟೆಂಬರ್ 2021, 8:58 IST
Last Updated 19 ಸೆಪ್ಟೆಂಬರ್ 2021, 8:58 IST
ಸುನೀಲ್ ಶೆಟ್ಟಿ
ಸುನೀಲ್ ಶೆಟ್ಟಿ   

ಬೆಂಗಳೂರು: ನಟ ಸುನೀಲ್ ಶೆಟ್ಟಿ ಅವರು ನಟನೆ ಜೊತೆ, ಉದ್ಯಮ, ಸಮಾಜ ಸೇವೆಯೊಂದಿಗೆ ಸಕ್ರಿಯರಾಗಿ ಜನರ ಹಾಗೂ ಅಭಿಮಾನಿಗಳ ನಡುವೆ ಸದಾ ಗುರುತಿಸಿಕೊಳ್ಳುತ್ತಾರೆ.

ಸುನೀಲ್ ಶೆಟ್ಟಿ ಅವರುತಮ್ಮ 60 ನೇ ವಯಸ್ಸಿನಲ್ಲೂ ಫಿಟ್‌ನೆಸ್‌ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಲ್ಲದೇ, ದೇಹವನ್ನು ಫಿಟ್‌ನೆಸ್ ಕಾಪಾಡಿಕೊಂಡಿರುವ ತರುಣರಂತೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಅವರು ನಿಯಮಿತವಾದ ವ್ಯಾಯಾಮ ಹಾಗೂ ಯೋಗದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಅವರು ಫಿಟ್‌ನೆಸ್‌ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸಲಹೆ ಸೂಚನೆ ಕೊಡುವುದರಲ್ಲಿ ಮುಂದು.

ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಫಿಟ್‌ನೆಸ್‌ ಮಂತ್ರವನ್ನು ಹೇಳಿಕೊಟ್ಟಿದ್ದು ಪುಸ್ತಕವೊಂದನ್ನು ಓದಿ ನಿಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಲಹೆ ನೀಡಿದ್ದಾರೆ.

ADVERTISEMENT

ಫಿಟ್‌ನೆಸ್ ಗುರು ಜೀತೆಂದ್ರ ಚೌಕ್ಸಿ ಅವರLose Fat, Get Fittr ಎಂಬ ಪುಸ್ತಕದ ಬಗ್ಗೆ ಸುನೀಲ್ ಶೆಟ್ಟಿ ಉಲ್ಲೇಖಿಸಿದ್ದು, ‘ನೀವು ಫಿಟ್‌ನೆಸ್‌ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು, ಹೆಚ್ಚು ಖರ್ಚು ಮಾಡಿ ತೊಂದರೆ ತೆಗೆದುಕೊಳ್ಳುವುದಕ್ಕಿಂತ ಈ ಪುಸ್ತಕ ಓದಿ, ನಾನು ಫಿಟ್‌ನೆಸ್ ಬಗ್ಗೆ ಓದಿದ ಅತ್ಯಂತ ಶ್ರೇಷ್ಠ ಪುಸ್ತಕ ಇದು. ಹೆಚ್ಚು ಹಣ ತೆತ್ತು ಡಯಟ್ ಮಾಡುವ ಬದಲು ಈ ಪುಸ್ತಕ ನಿಮಗೆ ಮಾನಸಿಕವಾಗಿ ಒಂದು ಸ್ಥಿರತೆ ಒದಗಿಸುತ್ತದೆ‘ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.

‘ಈ ಪುಸ್ತಕ ನಿಮ್ಮ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಹಾಗೂ ಫಿಟ್‌ನೆಸ್ ಕಾಪಾಡಿಕೊಳ್ಳಲು ಖಂಡಿತ ಸಹಾಯ ಮಾಡುತ್ತದೆ‘ ಎಂದು ಹೇಳಿದ್ಧಾರೆ.

ಇದರ ಜೊತೆ ಸುನೀಲ್ ಶೆಟ್ಟಿ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದು, ಕಳೆದ ಶನಿವಾರ ಅವರು ಮುಂಬೈ ಪೊಲೀಸರಿಗಾಗಿ ಶುದ್ಧ ಗಾಳಿ ಒದಗಿಸಬೇಕು ಎಂದು 800 ಗಾಳಿ ಶುದ್ಧಿಕರಿಸುವ ಯಂತ್ರ ಕೊಡುಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.