ADVERTISEMENT

2018ರಲ್ಲಿ ನಡೆದ ಭಾರತದ ಹುಲಿ ಗಣತಿ ವಿಶ್ವದಾಖಲೆ: ಇಲ್ಲಿದೆ ಮಾಹಿತಿ...

ಪಿಟಿಐ
Published 11 ಜುಲೈ 2020, 11:50 IST
Last Updated 11 ಜುಲೈ 2020, 11:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ:ಅತಿ ಹೆಚ್ಚು ಕ್ಯಾಮೆರಾಗಳನ್ನು ಬಳಸಿ ಭಾರತದಲ್ಲಿ 2018ರಲ್ಲಿ ನಡೆಸಲಾದ ಹುಲಿಗಣತಿ ಗಿನ್ನಿಸ್ ವಿಶ್ವದಾಖಲೆಗೆಸೇರ್ಪಡೆಯಾಗಿದೆ.

ವಿಶ್ವ ಹುಲಿ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು2018 ನೇ ಅಖಿಲ ಭಾರತ ಹುಲಿ ಗಣತಿಯ ನಾಲ್ಕನೇ ಆವೃತ್ತಿ ಫಲಿತಾಂಶವನ್ನು ಪ್ರಕಟಿಸಿದ್ದರು. ಭಾರತದಲ್ಲಿ ಒಟ್ಟು 2,967 ಹುಲಿಗಳು ಇರುವುದು ಸರ್ವೆಯಲ್ಲಿ ತಿಳಿದುಬಂದಿದೆ. ಇದು ಜಗತ್ತಿನಲ್ಲಿರುವ ಶೇಕಡಾ 75 ರಷ್ಟು ಹುಲಿಗಳ ಸಂತತಿಯಾಗಿದೆ.

‘ಅಖಿಲ ಭಾರತ ಹುಲಿಗಳ ಗಣತಿಯು ಗಿನ್ನಿಸ್ ವಿಶ್ವದಾಖಲೆಗೆ ಸೇರ್ಪಡೆಯಾಗಿದೆ. ಇದೊಂದು ಅದ್ಭುತ ಕ್ಷಣ. ಇದು ಆತ್ಮನಿರ್ಭರ್ ಭಾರತಕ್ಕೆ ಉತ್ತಮ ಉದಾಹರಣೆಯಾಗಿದೆ’ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವೇಡ್ಕರ್‌ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.