ADVERTISEMENT

ಫ್ಯಾಕ್ಟ್ ಚೆಕ್: ಐಎಸ್ ಉಗ್ರವಾದದ ಬಗ್ಗೆ ಬುರ್ಖಾಧಾರಿ ಮಹಿಳೆ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 19:30 IST
Last Updated 6 ನವೆಂಬರ್ 2022, 19:30 IST
   

ಬುರ್ಖಾಧಾರಿ ಮಹಿಳೆಯೊಬ್ಬರು ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಐಎಸ್ ಉಗ್ರವಾದದ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ‘ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್. ನಾನು ನರ್ಸ್ ಆಗಿ ಸೇವೆ ಮಾಡಲು ಬಯಸಿದ್ದೆ. ಆದರೆ ನಾನು ಇಂದು ಫಾತಿಮಾ ಆಗಿದ್ದೇನೆ. ಐಸಿಸ್ ಭಯೋತ್ಪಾದಕಿಯಾಗಿ ಅಫ್ಗಾನಿಸ್ತಾನದ ಜೈಲಿನಲ್ಲಿದ್ದೇನೆ. ಇದು ನನ್ನೊಬ್ಬಳ ಪರಿಸ್ಥಿತಿಯಲ್ಲ. 32 ಸಾವಿರ ಮಹಿಳೆಯರು ಮತಾಂತರಗೊಂಡು ಸಿರಿಯಾ ಹಾಗೂ ಯೆಮನ್‌ನ ಮರುಭೂಮಿಯಲ್ಲಿ ಸಿಲುಕಿಕೊಂಡಿದ್ದಾರೆ’ ಎಂದು ಮಹಿಳೆ ವಿಡಿಯೊದಲ್ಲಿ ಹೇಳಿದ್ದಾರೆ. ಆದರೆ ಇದು ನೈಜ ವಿಡಿಯೊವಲ್ಲ, ಸಿನಿಮಾವೊಂದರ ಟೀಸರ್ ಮಾತ್ರ.

‘ದಿ ಕೇರಳ ಸ್ಟೋರಿ’ ಎಂಬ ಚಲನಚಿತ್ರದ ಟೀಸರ್ ಇದಾಗಿದೆ ಎಂದು ‘ಇಂಡಿಯಾ ಟುಡೇ’ ಹಾಗೂ ‘ಲಾಜಿಕಲ್ ಇಂಡಿಯನ್’ ವರದಿ ಮಾಡಿವೆ. ಟೀಸರ್‌ನಲ್ಲಿ ಕಾಣಿಸಿಕೊಂಡಿರುವ ಚಿತ್ರನಟಿ ಅದಾ ಶರ್ಮಾ ಟ್ವಿಟರ್ ಖಾತೆಯಲ್ಲಿ ತಮ್ಮ ಮುಂದಿನ ಚಿತ್ರದ ಟೀಸರ್ ಹಂಚಿಕೊಂಡಿದ್ದಾರೆ. ಸನ್‌ಶೈನ್‌ ಪಿಕ್ಚರ್ಸ್ ಸಂಸ್ಥೆಯು ತನ್ನ ಯೂಟ್ಯೂಬ್ ಖಾತೆಯಲ್ಲಿ ಟೀಸರ್ ಹಂಚಿಕೊಂಡಿದೆ. ಐಎಸ್ ಸಂಘಟನೆಯು ಭಾರತದ ಮಹಿಳೆಯರನ್ನು ಮತಾಂತರ ಮಾಡಿ, ಭಯೋತ್ಪಾದಕರನ್ನಾಗಿ ಮಾಡಿದೆ ಎಂಬ ನೆಲೆಯಲ್ಲಿ ಚರ್ಚೆಯಾಗುತ್ತಿದೆ. ಆದರೆ, ವಿಡಿಯೊದಲ್ಲಿ ಚರ್ಚಿಸಲಾದ ವಿಚಾರಕ್ಕಿಂತ ಹೆಚ್ಚಾಗಿ, ಈ ವಿಡಿಯೊದ ಮೂಲದ ಬಗ್ಗೆ ಮಾತ್ರ ಫ್ಯಾಕ್ಟ್ ಚೆಕ್ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT