ADVERTISEMENT

Fact Check: ಮಹಿಳೆಯೊಬ್ಬರ ಜೊತೆಗಿನ ನೆಹರೂ ಅವರ ರೊಮ್ಯಾಂಟಿಕ್ ಚಿತ್ರ ನಿಜವೇ?

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 20:15 IST
Last Updated 15 ನವೆಂಬರ್ 2022, 20:15 IST
fact check: ನೆಹರೂ ಚಿತ್ರಗಳಿಗೆ ಅಸಂಬದ್ಧ ಉಲ್ಲೇಖ
fact check: ನೆಹರೂ ಚಿತ್ರಗಳಿಗೆ ಅಸಂಬದ್ಧ ಉಲ್ಲೇಖ   

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 133ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಂಚಿಕೊಂಡಿದ್ದಾರೆ. ಪ್ರತಿ ಚಿತ್ರಕ್ಕೂ ನೀಡಲಾಗಿದ್ದ ಅಡಿಬರಹಗಳು ವಿಚಿತ್ರವಾಗಿದ್ದವು. ‘ಮಹಿಳೆಯೊಬ್ಬರ ಜೊತೆ ನೆಹರೂ ರೊಮ್ಯಾಂಟಿಕ್ ಆಗಿ ಕಾಣಿಸಿರುವ ಅಪರೂಪದ ದೃಶ್ಯ ಇದು’ ಎಂದು ಸಂಜೀತ್ ಎಂಬುವರು ಬರೆದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಗೆ ಮುತ್ತಿಕ್ಕುವ, ಮಹಿಳೆಯೊಬ್ಬರು ಬಂದು ಆಲಂಗಿಸುವ ಹಾಗೂ ನರ್ತಕಿಯರ ಜೊತೆ ಅವರು ನಿಂತಿರುವ ಚಿತ್ರಗಳ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿದ್ದು, ನೆಹರೂ ಅವರು ಅಪಮಾರ್ಗದಲ್ಲಿ ನಡೆದಿದ್ದರು ಎಂಬ ಅರ್ಥದಲ್ಲಿ ಬಳಕೆದಾರರು ಪೋಸ್ಟ್‌ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿರುವ ಎಲ್ಲ ಚಿತ್ರಗಳನ್ನೂ ಲಾಜಿಕಲ್ ಇಂಡಿಯನ್ ತಾಣ ಪರಿಶೀಲಿಸಿದ್ದು, ಇವೆಲ್ಲವೂ ನೆಹರೂ ಅವರ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ ಎಂದು ತಿಳಿಸಿದೆ. ನೆಹರೂ ರೊಮ್ಯಾಂಟಿಕ್ ಆಗಿದ್ದಾರೆ ಎಂದು ಹೇಳಲಾಗುವ ಚಿತ್ರವು ಹೋವರ್ಡ್ ಬ್ರೆಂಟನ್ ಅವರ ‘ಡ್ರಾಯಿಂಗ್ ದಿ ಲೈನ್’ ನಾಟಕದ ದೃಶ್ಯವೇ ಹೊರತು ನೈಜ ಚಿತ್ರವಲ್ಲ. ವಿಮಾನ ನಿಲ್ದಾಣದಲ್ಲಿ ನೆಹರೂ ಅವರ ಜೊತೆ ಕಾಣಿಸಿಕೊಂಡ ಮಹಿಳೆ, ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್. ಮತ್ತೊಂದು ಚಿತ್ರದಲ್ಲೂ ವಿಜಯಲಕ್ಷ್ಮಿ ಅವರೇ ಇದ್ದಾರೆ. ಈ ಹಿಂದೆಯೂ ಈ ಚಿತ್ರಗಳನ್ನು ಇಟ್ಟುಕೊಂಡು ನೆಹರೂ ಅವರ ತೇಜೋವಧೆ ಮಾಡುವಂತಹ ಅಡಿಬರಹಗಳನ್ನು ನೀಡಲಾಗಿತ್ತು ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT