ADVERTISEMENT

ಶಾಂಗ್ರಿಲಾ ‘ಮೂನ್‌ ಕೇಕ್‌’

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 15:59 IST
Last Updated 20 ಆಗಸ್ಟ್ 2019, 15:59 IST
Mooncakes
Mooncakes   

ಶಾಂಗ್ರಿಲಾ ಹೊಟೇಲ್ಸ್‌ ಶರತ್ಕಾಲದ ಮಧ್ಯಾವಧಿ ಸಂಭ್ರಮಿಸಲು ‘ಮೂನ್‌ ಕೇಕ್‌’ ಹಬ್ಬ ಆಯೋಜಿಸಿದೆ. ಅಬುಧಾಬಿ, ದುಬೈ, ಇಸ್ತಾನ್‌ಬುಲ್‌, ನವದೆಹಲಿ ಮತ್ತು ಬೆಂಗಳೂರು ಶಾಖೆಗಳಲ್ಲಿ ಕೆಲಸ ಮಾಡುವ ಚೀಫ್‌ ಶೆಫ್‌ಗಳು ಸೇರಿ ಆಯಾ ಪ್ರಾಂತದ ಸ್ಥಳೀಯ ಸ್ವಾದವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕೇಕ್‌ಗಳನ್ನು ತಯಾರಿಸಿದ್ದಾರೆ.

ಡೇಟ್‌ ಮೂನ್‌ ಕೇಕ್‌, ಪಿಸ್ತಾಶಿಯೊ ಮೂನ್‌ ಕೇಕ್‌, ಸ್ಯಾಫ್ರನ್‌ ಮೂನ್‌ ಕೇಕ್‌ ಸೇರಿದಂತೆ ಕೆಲವು ವಿಶೇಷ ಕೇಕ್‌ಗಳನ್ನು ತಯಾರಿಸಿದ್ದಾರೆ. ಈ ಮೂನ್‌ ಕೇಕ್‌ ಹಬ್ಬ ಇಂದಿನಿಂದ ಸೆಪ್ಟೆಂಬರ್‌ 13ರವರೆಗೆ ನಡೆಯಲಿದೆ. ಹೋಟೆಲ್‌ಗೆ ಬರುವ ಅತಿಥಿಗಳು ಮತ್ತು ಖಾದ್ಯ ಪ್ರಿಯರು ಇಲ್ಲಿ ಕೇಕ್‌ ಸವಿಯಲು ಅವಕಾಶವಿದೆ.

ಚೀನಾದ ಇತಿಹಾಸದಂತೆ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಶರತ್ಕಾಲದಲ್ಲಿ ಚೀನಿ ದೊರೆಗಳು ಫಸಲು ಸಮೃದ್ಧವಾಗಿರಲೆಂದು ಚಂದ್ರನನ್ನು ಪ್ರಾರ್ಥಿಸಲು ಪ್ರಾರಂಭಿಸಿದರು. ಚಂದ್ರನ ಆಕಾರದ ಕೇಕ್‌ ತಯಾರಿಸುವ ಮೂಲಕ ದೇವತೆಗೆ ತಮ್ಮ ಶ್ರದ್ಧೆಯನ್ನು ವ್ಯಕ್ತಪಡಿಸುತ್ತಿದ್ದರು. ಈ ದಿನ ಚಂದ್ರನ ಗುಣಗಾನ ಮಾಡುತ್ತ ಪೂರ್ಣ ಚಂದ್ರನ ದರ್ಶನ ಮಾಡುತ್ತಿದ್ದರು. ಆ ಸಂಭ್ರಮಕ್ಕೆ ಮೂನ್‌ ಕೇಕ್‌ಗಳದ್ದೇ ಸಾಥ್‌ ಇರುತ್ತಿತ್ತಂತೆ.

ADVERTISEMENT

ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಆಯೋಜಿಸಿರುವ ಈ ‘ಮೂನ್‌ ಕೇಕ್‌’ ಹಬ್ಬದಲ್ಲಿ ಕೇಕ್‌ ಖರೀದಿಸಬಹುದು. ಕೇಕ್‌ ಆಸ್ವಾದವನ್ನು ಸವಿಯುವುದಕ್ಕೂ ಅವಕಾಶವಿದೆ. ಮುಂಗಡ ಆರ್ಡರ್‌ ಮಾಡಿದರೆ ಕೆಲವು ವಿಶೇಷ ರಿಯಾಯಿತಿ ಕೂಡ ಇದೆ.

ಆರ್ಡರ್‌ ನೀಡಲು (91 80) 4512 6440 ಅಥವಾ ಇ–ಮೇಲ್‌: shangpalace.slbl@shangri-la.com ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.