ADVERTISEMENT

ಯೂರೋಪ್‌ನಲ್ಲಿ ಈ ಹುಳುಗಳನ್ನು ಆಹಾರವಾಗಿ ಸೇವಿಸಬಹುದು!

ರಾಯಿಟರ್ಸ್
Published 14 ಜನವರಿ 2021, 5:19 IST
Last Updated 14 ಜನವರಿ 2021, 5:19 IST
ಮೀಲ್‌ವರ್ಮ್‌ (ರಾಯಿಟರ್ಸ್‌ ಚಿತ್ರ)
ಮೀಲ್‌ವರ್ಮ್‌ (ರಾಯಿಟರ್ಸ್‌ ಚಿತ್ರ)   

ಲಂಡನ್‌: ಸೇವಿಸಬಹುದಾದ ಆಹಾರವೆಂಬ ಮಾನ್ಯತೆ ಪಡೆದಿರುವ ಮೀಲ್‌ವರ್ಮ್‌(ಹುಳುಗಳು) ಶೀಘ್ರದಲ್ಲೇ ಯುರೋಪಿನ ಜನರ ಭೋಜನದ ಬಟ್ಟಲುಗಳಲ್ಲಿ ಭಕ್ಷ್ಯಗಳಾಗಿ ಕಾಣಿಸಿಕೊಳ್ಳಲಿವೆ.

ಯುರೋಪ್‌ ಆಹಾರ ಸುರಕ್ಷತಾ ಸಂಸ್ಥೆ (ಇಎಫ್‌ಎಸ್‌ಎ) ಬುಧವಾರ ಈ ಬಗ್ಗೆ ನಿರ್ಧಾರ ಪ್ರಕಟಿಸಿದ್ದು, ಹಳದಿ ಬಣ್ಣದ ಈ ಹುಳುಗಳನ್ನು ಆಹಾರ ಪದಾರ್ಥಗಳಲ್ಲಿ ಬಳಸಲು ಅವಕಾಶ ನೀಡಿದೆ. ಹೀಗಾಗಿ ಇವು ಇನ್ನುಮುಂದೆ, ಕರ್ರಿ, ಬಿಸ್ಕತ್ತುಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲಿ ಬಳಕೆಯಾಗಲಿವೆ.

ಮೀಲ್‌ವರ್ಮ್‌ಗಳು ಜೀರುಂಡೆ ಲಾರ್ವಗಳಾಗಿದ್ದು, ಈಗಾಗಲೇ ಯುರೋಪ್‌ನಲ್ಲಿ ಜನರ ಅಚ್ಚುಮೆಚ್ಚಿನ ಆಹಾರವಾಗಿ ಬಳಕೆಯಾಗುತ್ತಿದೆ.

ADVERTISEMENT

ಇನ್ನು ಈ ಕುರಿತು ಮಾತನಾಡಿರುವ ಆಹಾರ ವಿಜ್ಞಾನಿ ಎರ್ಮೊಲೋಸ್ ವರ್ವೆರಿಸ್ 'ಪ್ರೋಟೀನ್, ಕೊಬ್ಬು ಮತ್ತು ನಾರಿನಾಂಶದಿಂದ ಸಮೃದ್ಧವಾಗಿರುವ ಈ ಹುಳುಗಳು ಮುಂಬರುವ ವರ್ಷಗಳಲ್ಲಿ ಯುರೋಪ್‌ನ ಭೋಜನದ ಬಟ್ಟಲುಗಳಲ್ಲಿ ಕಾಣಿಸಿಕೊಳ್ಳುವ ಅನೇಕ ಕೀಟಗಳ ಪೈಕಿ ಮೊದಲನೆಯವಾಗಲಿವೆ,' ಎಂದು ಹೇಳಿದ್ದಾರೆ.

2018ರಲ್ಲಿ ಜಾರಿಗೆ ಬಂದ 'ಹೊಸ ಆಹಾರ' ನಿಯಂತ್ರಣ ನಿಯಮಗಳ ಅಡಿಯಲ್ಲಿ, ವಿಜ್ಞಾನಿ ಎರ್ಮೊಲೋಸ್ ವರ್ವೆರಿಸ್ ಅವರ ಉಸ್ತುವಾರಿಯಲ್ಲಿ ಮೀಲ್‌ವರ್ಮ್‌ ಆಹಾರದ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಆಹಾರ ಮಾನ್ಯತೆ ಪಡೆದ ಮೊದಲ ಹುಳು ಇದಾಗಿದೆ. ಹೀಗಾಗಿ, ಇದೇ ಮಾದರಿಯ ಆಹಾರಕ್ಕಾಗಿ ಈಗ ಅನೇಕ ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.