ADVERTISEMENT

ಕೋವಿಡ್ ಲಾಕ್‌ಡೌನ್‌: ತಮಿಳುನಾಡಿನಲ್ಲಿ ಮತ್ತೆ ಒಂದು ವಾರ ನಿರ್ಬಂಧ ವಿಸ್ತರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2021, 16:49 IST
Last Updated 2 ಜುಲೈ 2021, 16:49 IST
ಚೆನ್ನೈನ ದೇವಾಲಯವೊಂದರಲ್ಲಿ ಭಕ್ತರೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವುದು–ಸಾಂದರ್ಭಿಕ ಚಿತ್ರ
ಚೆನ್ನೈನ ದೇವಾಲಯವೊಂದರಲ್ಲಿ ಭಕ್ತರೊಬ್ಬರು ಪ್ರಾರ್ಥನೆ ಸಲ್ಲಿಸುತ್ತಿರುವುದು–ಸಾಂದರ್ಭಿಕ ಚಿತ್ರ   

ಚೆನ್ನೈ: ಕೊರೊನಾ ವೈರಸ್‌ ಸೋಂಕು ನಿಯಂತ್ರಿಸಲು ಜಾರಿಯಲ್ಲಿರುವ 'ಕೋವಿಡ್–19 ಲಾಕ್‌ಡೌನ್‌' ಅವಧಿಯನ್ನು ತಮಿಳುನಾಡು ಸರ್ಕಾರ ಮತ್ತೊಂದು ವಾರ ವಿಸ್ತರಿಸಿದೆ.

ಲಾಕ್‌ಡೌನ್‌ ನಿಯಮಗಳನ್ನು ಮತ್ತಷ್ಟು ಸಡಿಲಿಸಲಾಗಿದ್ದು, ಜುಲೈ 12ರ ವರೆಗೂ ನಿರ್ಬಂಧಗಳು ಮುಂದುವರಿಯಲಿವೆ. ಅಂಗಡಿಗಳಲ್ಲಿ ವ್ಯಾಪಾರ ಹಾಗೂ ಇತರೆ ಚಟುವಟಿಕೆಗಳನ್ನು ರಾತ್ರಿ 8ರ ವರೆಗೂ ಮುಂದುವರಿಸಬಹುದಾಗಿದೆ.

ಹೊಟೇಲ್‌ಗಳು ಮತ್ತು ಚಹಾದ ಅಂಗಡಿಗಳಲ್ಲಿ ಶೇ 50ರಷ್ಟು ಗ್ರಾಹಕರ ಪ್ರವೇಶಕ್ಕೆ ಅವಕಾಶ ನೀಡಬಹುದಾಗಿದೆ. ಅಂತರ್‌ಜಿಲ್ಲೆ ಮತ್ತು ಜಿಲ್ಲೆಯ ಒಳಗಡೆ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಒಟ್ಟು ಆಸನದ ಸಾಮರ್ಥ್ಯದ ಶೇ 50ರಷ್ಟು ಜನರು ಪ್ರಯಾಣಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಶುಕ್ರವಾರ 24 ಗಂಟೆಗಳ ಅಂತರದಲ್ಲಿ ಕೋವಿಡ್‌–19 ದೃಢಪಟ್ಟ 4,230 ಹೊಸ ಪ್ರಕರಣಗಳು ತಮಿಳುನಾಡಿನಲ್ಲಿ ದಾಖಲಾಗಿವೆ. ಇದೇ ಅವಧಿಯಲ್ಲಿ ಸೋಂಕಿನಿಂದ 97 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 36,707 ಪ್ರಕರಣಗಳು ಸಕ್ರಿಯವಾಗಿವೆ. ಮೇ 21ರಂದು 24 ಗಂಟೆಗಳಲ್ಲಿ 36,184 ಪ್ರಕರಣಗಳು ದಾಖಲಾಗಿತ್ತು, ಮುಂದೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.