ADVERTISEMENT

ಪಂಜಾಬ್‌ ರೈತರಿಗೆ ನೂತನ ಸಿಎಂ ಚನ್ನಿ ಕೊಡುಗೆ: ನೀರು, ವಿದ್ಯುತ್‌ ಬಿಲ್‌ ಮನ್ನಾ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಸೆಪ್ಟೆಂಬರ್ 2021, 16:35 IST
Last Updated 20 ಸೆಪ್ಟೆಂಬರ್ 2021, 16:35 IST
ಮುಖ್ಯಮಂತ್ರಿಯಾದ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಿಎಂ ಚನ್ನಿ
ಮುಖ್ಯಮಂತ್ರಿಯಾದ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಿಎಂ ಚನ್ನಿ    

ಚಂಡೀಗಢ: ಹೊಸದಾಗಿ ಅಧಿಕಾರ ಸ್ವೀಕರಿಸಿದ ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಸೋಮವಾರ ರೈತರ ನೀರು, ವಿದ್ಯುತ್‌ ಶುಲ್ಕ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿಯಾದ ಬಳಿಕ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಚನ್ನಿ ಸೋಮವಾರ ನಡೆಸಿದರು. ಈ ವೇಳೆ ಅವರು ತಮ್ಮನ್ನು ‘ಆಮ್ ಆದ್ಮಿ’ ಎಂದು ಹೇಳಿಕೊಂಡರು.

ಪಾರದರ್ಶಕ ಸರ್ಕಾರವನ್ನು ಖಾತ್ರಿಪಡಿಸುವುದಾಗಿ ತಿಳಿಸಿದ ಅವರು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.