ADVERTISEMENT

ಬಿಎಂಟಿಸಿ ಪ್ರಯಾಣ ದರ ಏರಿಸಲು ಪ್ರಸ್ತಾವನೆ ಬಂದಿದೆ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 10:13 IST
Last Updated 25 ಫೆಬ್ರುವರಿ 2021, 10:13 IST
   

ಬೆಂಗಳೂರು: ಬಿಎಂಟಿಸಿ ಪ್ರಯಾಣ ದರ ಏರಿಸುವ ಬಗ್ಗೆ ನಿಗಮದಿಂದ ಪ್ತಸ್ತಾವನೆ ಬಂದಿದ್ದು, ಈ ಸಂಬಂಧ ಮುಖ್ಯಮಂತ್ರಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ತಿಳಿಸಿದರು.

ಉಳಿದ ನಿಗಮಗಳಲ್ಲಿ ಕಳೆದ ವರ್ಷವೇ ಶೇ 13 ರಷ್ಟು ಏರಿಕೆ ಮಾಡಲಾಗಿದೆ. ಬಿಎಂಟಿಸಿ ಶೇ 18 ರಿಂದ ಶೇ 20 ರಷ್ಟು ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಅಷ್ಟು ಪ್ರಮಾಣ ಏರಿಕೆ ಸಾಧ್ಯವಿಲ್ಲ. ಪ್ರಯಾಣಿಕರಿಗೆ ಹೊರೆ ಆಗದಂತೆ ಏರಿಕೆ ಗೆ ಮನವಿ ಮಾಡಲಾಗುವುದು. ಅಂತಿಮ ನಿರ್ಧಾರ ಮುಖ್ಯಮಂತ್ರಿಯವರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.