
ಪ್ರಜಾವಾಣಿ ವಾರ್ತೆಚಿಕ್ಕಮಗಳೂರು: ಕೋವಿಡ್ನಿಂದಾಗಿ ಇದೇ 21ರಿಂದ ಮೇ 4 ರವರೆಗೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇವರ ದರ್ಶನ, ಪೂಜೆ, ಪ್ರಸಾದ ಮತ್ತು ವಸತಿ ಎಲ್ಲದಕ್ಕೂ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ದೇವಿ ಮಂಗಳಾರತಿಯ ನೇರಪ್ರಸಾರವನ್ನು 'ಯ್ಯೂ ಟ್ಯೂಬ್'ನಲ್ಲಿ ವೀಕ್ಷಿಸಬಹುದು ಎಂದು ಕ್ಷೇತ್ರದ ಧರ್ಮದರ್ಶಿ ಜಿ.ಭೀಮೇಶ್ವರ ಜೋಶಿ ತಿಳಿಸಿದ್ದಾರೆ.
ಶೃಂಗೇರಿ ಶಾರದಾ ಪೀಠದ ಎಲ್ಲ ದೇಗುಲಗಳಲ್ಲೂ ಭಕ್ತರ ಪ್ರವೇಶಕ್ಕೆ ಅನಿರ್ದಿಷ್ಟಾವಧಿಗೆ ನಿರ್ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.