ADVERTISEMENT

ವರ್ಗಾವಣೆ ವಿಳಂಬ: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 10:17 IST
Last Updated 20 ಸೆಪ್ಟೆಂಬರ್ 2021, 10:17 IST
ಧರಣಿ ನಿರತ ಉಪನ್ಯಾಸಕರು
ಧರಣಿ ನಿರತ ಉಪನ್ಯಾಸಕರು    

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಕಾಯ್ದೆ ರೂಪಿಸಲು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಇಲಾಖೆಯ ಕೇಂದ್ರ ಕಚೇರಿಯ ಮುಂಭಾಗದಲ್ಲಿ ನೂರಾರು ಉಪನ್ಯಾಸಕರು ಸೋಮವಾರ ಧರಣಿ ನಡೆಸಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎಸ್.ವಿ. ಸಂಕನೂರು, ಬೋಜೇಗೌಡ ಮತ್ತು ಹನುಮಂತಪ್ಪ ನಿರಾಣಿ ಧರಣಿ ಸ್ಥಳಕ್ಕೆ ಬಂದು ಉಪನ್ಯಾಸಕರನ್ನು ಉದ್ದೇಶಿಸಿ ಮಾತನಾಡಿ, ‘ ನಿಮ್ಮ ಬೇಡಿಕೆಗಳ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತೇವೆ’ ಎಂದು ಭರವಸೆ ನೀಡಿದರು.

ಕಚೇರಿಯ ಆವರಣ ಪ್ರವೇಶಿಸಲು ಪೊಲೀಸರುಅವಕಾಶ ನೀಡದಕಾರಣ ಮುಂಭಾಗದರಸ್ತೆಯಲ್ಲಿಯೇ ಉಪನ್ಯಾಸಕರು ಧರಣಿಕುಳಿತರು.ಇದೇ ವೇಳೆ ಕಚೇರಿಗೆ ಬಂದ ಇಲಾಖೆಯ ನಿರ್ದೇಶಕಿ ಸ್ನೇಹಲ್ ಅವರನ್ನು ತಡೆದ ಉಪನ್ಯಾಸಕರು,ಪೊಲೀಸರಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಉಪನ್ಯಾಸಕರ ಸಮಸ್ಯೆಗಳನ್ನು ಶ್ರೀಕಂಠೇಗೌಡ ಮತ್ತು ಸಂಕನೂರು ಅವರು ನಿರ್ದೇಶಕರಿಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.