ADVERTISEMENT

ಅವಳ ಛಲ ನನಗೆ ಸ್ಫೂರ್ತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 3:22 IST
Last Updated 8 ಮಾರ್ಚ್ 2018, 3:22 IST
ಶೃತಿವೀಣಾ ಅಮ್ಮಯ್ಯ.ಹೆಚ್.ಎಲ್
ಶೃತಿವೀಣಾ ಅಮ್ಮಯ್ಯ.ಹೆಚ್.ಎಲ್   

ಹೆಣ್ಣಿಗೆ ಹಠ ಇರಬಾರದು, ಗಂಡಿಗೆ ಚಟ ಇರಬಾರದು ಅನ್ನೋ ಗಾದೆ ಮಾತಿಗೆ ತದ್ವಿರುದ್ಧವಾಗಿರೋ ಆಕೆ ಬಗ್ಗೆ ಹೇಳಿಕೊಳ್ಳೋಕೆ ಅದೇನೋ ಖುಷಿ. ಹೌದು ಆಕೆ ನನ್ನ ಜೀವನದ ಸ್ಫೂರ್ತಿ, ಧೈರ್ಯ, ಮಾರ್ಗದರ್ಶಕಿ ಹೀಗೆ ಹೇಳ್ತಾ ಹೋದ್ರೆ ಪೀಠಿಕೆ ಮುಗಿಯೋದೆ ಇಲ್ಲ. ನನ್ನ ಜೀವನಕ್ಕೆ ಸ್ಫೂರ್ತಿ ಆಗಿರೋ ಒಬ್ಬ ಸಾಮಾನ್ಯ ಮಹಿಳೆ ಬಗ್ಗೆ ಹೇಳೋಕೆ ಇಷ್ಟ ಪಡ್ತೀನಿ.

ನಾನು ಪ್ರೌಢಶಾಲೆಯಲ್ಲಿ ಓದ್ತಾ ಇದ್ದೆ. ಆಕೆ ಯಾರು? ಏನು? ಅಂತ ಪರಿಚಯ ಆಗೋಕೆ ಶುರುವಾಗಿದ್ದೇ ಆವಾಗ. ಅಲ್ಲಿವರೆಗೂ ಪರಿಚಯವಿರಲಿಲ್ಲ ಅಂತೇನಲ್ಲ ನಾನು ಅಷ್ಟು ಗಮನಕ್ಕೆ ತೆಗೆದುಕೊಂಡಿರಲಿಲ್ಲ ಅಷ್ಟೆ. ದಿನಾಲೂ ಆಕೆನಾ ನೋಡ್ತಿದ್ದೆ ಅನ್ನೋದಷ್ಟೆ ಗೊತ್ತು. ಆಮೇಲ್ ಒಂದೊಂದೇ ಅಂಶನ ಮೆಲ್ಲಕೆ ಅಬ್ಸರ್ವ್ ಮಾಡ್ತಾ ಹೋದೆ. ಆಕೆ ಮಾತು, ನಗು ಎಲ್ಲರನ್ನೂ ಗಮನ ಮಾಡೋ ತರ ಇತ್ತು. ಇಷ್ಟು ಹೋಮ್ಲಿ ಆಗಿರೋ ಈಕೆ ಒಳಗೂ ಒಬ್ಳು ಹಠವಾದಿ ಇದಾಳೆ ಅಂತ ಕನ್ಸಲ್ಲೂ ಅಂದುಕೊಂಡಿರಲಿಲ್ಲ. ಇಷ್ಟು ಮೃದು ಸ್ವಭಾವದವಳಾಗಿದ್ರೂ ಕೂಡ ಹಠ ಅನ್ನೋದು ಆಕೆಲಿ ಎಷ್ಟಿತ್ತು ಅಂದ್ರೆ, ಜೀವನ ನಡೆಸಿದ್ರೆ ಹೀಗೆ ನಡೆಸ್ಬೇಕು ಅನ್ನೋ ಛಲದಿಂದಲೇ ಏನೋ ಆಕೆ ಪತಿ ಬಗ್ಗೆ ತನ್ನೂರಲ್ಲಿ ಒಳ್ಳೆ ರೀತಿಲಿ ಜನ ಮಾತಾಡ್ತಾರೆ ಅಂದ್ರೆ ಅದಕ್ಕೆ ಕಾರಣ ಈಕೆನೆ.
ತನ್ನ ಜೀವಕ್ಕಿಂತ ಹೆಚ್ಚಾಗಿ ಇಷ್ಟ ಪಡ್ತಿದ್ದ ಬಾಳ ಸಂಗಾತಿನ ಕಳ್ಕೊಂಡಾಗ ಕಣ್ಣ್ ಮುಂದೆ ಲೈಫ್ ಅನ್ನೋದು ದೊಡ್ಡ ಯಕ್ಷ ಪ್ರಶ್ನೆಯಾಗಿ ಕಾಣೋಕೆ ಶುರು ಆಯ್ತು. ಆದ್ರೂ ಧೈರ್ಯಗೆಡದೆ ಕಷ್ಟನ್ನ ಮಕ್ಳು, ಆಪ್ತರ ಹತ್ರ ಹಂಚ್ಕೊಂಡ್ಳು ಕೊಟ್ಟ ಸಲಹೆನೂ ತಗೊಂಡು, ಬದುಕಿನ್ ಬಂಡಿನ ತನ್ನ ಹೆಗಲ ಮೇಲೆ ಹಾಕ್ಕೊಂಡು ಇಲ್ಲಿವರೆಗೆ ತಂದ್ಲು. ಸಾಧನೆ ಮಾಡಿದ್ ಮಹಿಳೆಯರ್ ತರ ಆಕೆ ಏನೂ ಸಾಧನೆ ಮಾಡ್ಲಿಲ್ಲ ಆದರೆ ಲೈಫಲ್ಲಿ ಬದುಕನ್ನ ಕಟ್ಟಿಕೊಂಡ ರೀತಿಯಿದಿಯಲ್ಲ ಅದನ್ನ ಪ್ರತಿಯೊಬ್ಬ ಮಹಿಳೆನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉನ್ನತ ವಿದ್ಯಾಭ್ಯಾಸ ಕೊಡ್ಸಿದ್ಲು, ಬದುಕು ಕಟ್ಟಿಕೊಳ್ಳಲು ರ್ತಿ ಆದಳು... ಆಕೆನ ನನ್ನ ತಾಯಿ ಅಂತ ಹೇಳ್ಕೊಳ್ಳೊಕೆ ಹೆಮ್ಮೆ ಆಗತ್ತೆ. ಎಲ್ಲಾ ತಾಯಂದಿರು ಮಕ್ಳಿಗೋಸ್ಕರ ಇದನ್ನೇ ಮಾಡ್ತಾರೆ ಆದ್ರೆ, ಕೆಲವರಿಗೆ ಮಾತ್ರ ಸ್ಫೂರ್ತಿಯಾಗಿ ಜೊತೆಲಿರ್ತಾರೆ.

-ಶೃತಿವೀಣಾ.ಡಿ ಹಿರೇಮಗಳೂರು
ಬೇಲೂರು ರಸ್ತೆ, ಹಿರೇಮಗಳೂರು
ಚಿಕ್ಕಮಗಳೂರು
 

ADVERTISEMENT


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.