ADVERTISEMENT

ರಿಯಾಲಿಟಿ ಷೋ ಅತೃಪ್ತರಿಂದ ಅಪಪ್ರಚಾರ

ವಿಜಯ್ ಜೋಷಿ
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST
ವಿ. ಮನೋಹರ್‌
ವಿ. ಮನೋಹರ್‌   

* ‘ರಿಯಾಲಿಟಿ ಷೋಗಳಲ್ಲಿ ವಿಜೇತರನ್ನು ಮೊದಲೇ ತೀರ್ಮಾನಿಸಲಾಗಿರುತ್ತದೆ. ನಾನು ಅಂತಹ ಕಾರ್ಯಕ್ರಮಗಳ ತೀರ್ಪುಗಾರಳಾಗಿ ಹೋಗುವುದನ್ನು ನಿಲ್ಲಿಸಿದ್ದೇನೆ’ ಎಂದು ಗಾಯಕಿ ಬಿ.ಕೆ. ಸುಮಿತ್ರಾ ಹೇಳಿದ್ದಾರೆ. ಇಂಥ ಕಾರ್ಯಕ್ರಮಗಳಲ್ಲಿ ಫಲಿತಾಂಶ ಮೊದಲೇ ತೀರ್ಮಾನ ಆಗಿರುತ್ತದೆಯೇ?
ಉ:
ಹಾಗೆ ಹೇಳಲು ಆಗದು. ಆದರೆ, ನಿರ್ಣಾಯಕರಿಗೆ ಕೆಲವರ ಬಗ್ಗೆ ಒಳ್ಳೆಯ ಭಾವ ಮೂಡಬಹುದು. ಪ್ರತಿ ಕಾರ್ಯಕ್ರಮದಲ್ಲೂ ಒಂದಿಷ್ಟು ಅತೃಪ್ತರು ಇರುತ್ತಾರೆ. ತಾವು ಗೆಲ್ಲದಿದ್ದಾಗ ಅವರು ಒಂದಿಷ್ಟು ಅಪಪ್ರಚಾರ ನಡೆಸುತ್ತಾರೆ. ಜನರ ಅನುಕಂಪ ಯಾರ ಪರ ಇದೆಯೋ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತಾರೆ ಎಂದು ಸಾರಾಸಗಟಾಗಿ ಹೇಳುವುದು ಸರಿಯಲ್ಲ.

*ರಿಯಾಲಿಟಿ ಷೋಗಳಲ್ಲಿ ನಾಟಕೀಯತೆಯೇ ಹೆಚ್ಚು ಎಂಬ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆ...?
ಉ:
ನಾನು ‘ಚಂದನ’ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ‘ರಿಯಾಲಿಟಿ ಷೋ’ದ ಭಾಗವಾಗಿದ್ದೇನೆ. ಇದರಲ್ಲಿ ಹಾಡುಗಳ ಸರಿ–ತಪ್ಪುಗಳ ವಿಚಾರವಾಗಿ ನಾವು ಬಹಳ ನಿಖರ ನಿಲುವು ತಾಳುತ್ತೇವೆ. ಬೇರೆ ವಾಹಿನಿಗಳಲ್ಲಿನ ಮಾನದಂಡಗಳು ಬೇರೆ ಬೇರೆ ಇರಬಹುದು. ಅವರದ್ದು ಸಂಪೂರ್ಣವಾಗಿ ಮನರಂಜನೆ ಆಧಾರಿತ. ಆ ದೃಷ್ಟಿಯಿಂದಲೇ ಅವರು ಆಲೋಚಿಸುತ್ತಾರೆ.

* ಸ್ಪರ್ಧಿಗಳಿಗೆ ಶಾಸ್ತ್ರೀಯ ಸಂಗೀತದ ಜ್ಞಾನ ಇರುವುದಿಲ್ಲವೇ?
ಉ: ರಿಯಾಲಿಟಿ ಷೋಗಳಿಗಾಗಿ ಎಂದೇ ನಾಲ್ಕೈದು ಹಾಡು ಕಲಿತು, ವೇದಿಕೆ ಮೇಲೆ ಅವನ್ನು ಹಾಡುವುದು ಸರಿಯಲ್ಲ. ಶಾಸ್ತ್ರೀಯ ಸಂಗೀತ ಕಲಿತ ಬಹಳಷ್ಟು ಜನ ಇಲ್ಲಿಗೆ ಬರುತ್ತಿಲ್ಲ. ಅವರು ಬಂದರೆ ನಿಜವಾದ ಸ್ಪರ್ಧೆ ಇರುತ್ತದೆ. ಕಲಿಯದವರು ಬರುತ್ತಾರೆ, ಎಲ್ಲರೂ ಸುಮಾರಾಗಿ ಹಾಡುತ್ತಾರೆ. ಆಗ ನಿರ್ಣಾಯಕರಿಗೆ ತೀರ್ಮಾನ ಕೊಡುವುದು ಬಹಳ ಕಷ್ಟವಾಗುತ್ತೆ. ಸಂಗೀತ ಕಲಿತವರಾದರೆ, ಸರಿ–ತಪ್ಪು ಹೇಳಬಹುದು.

ADVERTISEMENT

* ರಿಯಾಲಿಟಿ ಷೋನಲ್ಲಿ ಹೆಸರು ಮಾಡಿದವರು ನಂತರ ಸಂಗೀತ ಕ್ಷೇತ್ರಕ್ಕೆ ಬರುತ್ತಿದ್ದಾರಾ?
ಉ: ‘ಝೀ’ ವಾಹಿನಿಯ ರಿಯಾಲಿಟಿ ಷೋ ಮೂಲಕ ಬಂದ ಒಬ್ಬರು ಈಗ ಸಿನಿಮಾಗಳಲ್ಲಿ ಹಾಡುತ್ತಿದ್ದಾರೆ. ಈ ರೀತಿಯ ಐದಾರು ಜನ ಇದ್ದಾರೆ.

* ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಜಾತಿ, ಪ್ರದೇಶ, ಪ್ರಭಾವ ಕೆಲಸ ಮಾಡುತ್ತಿವೆಯೇ?
ಉ: ಹಾಗೇನೂ ಇಲ್ಲ. ಆ ರೀತಿ ಮಾಡಿದರೆ ಜನ ಒಪ್ಪುತ್ತಾರಾ? ಗಲಾಟೆ ಆಗಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.