ADVERTISEMENT

25 ವರ್ಷಗಳ ಹಿಂದೆ: ಭಾನುವಾರ 28.7.1996

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 19:45 IST
Last Updated 27 ಜುಲೈ 2021, 19:45 IST
   

ಒಲಿಂಪಿಕ್ಸ್ ಗ್ರಾಮದ ಬಳಿ ಭಾರೀ ಸ್ಫೋಟ

ಅಟ್ಲಾಂಟಾ, ಜುಲೈ 27 (ಯುಎನ್‌ಐ, ಪಿಟಿಐ)– ಒಲಿಂಪಿಕ್ಸ್ ಶತಮಾನೋತ್ಸವದ ನೆನಪಿಗಾಗಿ ನಿರ್ಮಿಸಲಾಗಿದ್ದ ಮನೋ ರಂಜನಾ ಪಾರ್ಕ್‌ನಲ್ಲಿ ಭಾರತೀಯ ಕಾಲ ಮಾನದ ಪ್ರಕಾರ ನಿನ್ನೆ ರಾತ್ರಿ ಸುಮಾರು 11ಗಂಟೆ ವೇಳೆಗೆ ಶಕ್ತಿಯುತವಾದ ಸ್ಫೋಟ ಸಂಭವಿಸಿದ್ದರಿಂಧ ಕನಿಷ್ಠ ಇಬ್ಬರು ಸತ್ತಿದ್ದು, 200 ಮಂದಿ ಗಾಯಗೊಂಡಿದ್ದಾರೆ.

ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಅಪೂರ್ವ ಎನ್ನಬಹುದಾದ ಬಿಗಿಬಂದೋಬಸ್ತಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟದ ಪ್ರದೇಶದ ಪಕ್ಕದಲ್ಲಿಯೇ ಈ ಸ್ಫೋಟ ಸಂಭವಿಸಿದ್ದರಿಂದ ಇಡೀ ನಗರ ಭಯಗ್ರಸ್ಥವಾಗಿದೆ. ಒಲಿಂಪಿಕ್ಸ್ ಕ್ರೀಡೆ ನಿಗದಿತವಾಗಿರುವಂತೆಯೇ ಮುಂದುವರಿಯುವುದು ಎಂದು ಐಒಜಿ ಫ್ರಾಂಕಾಯಿಸ್ ಶರಾರ್ಡ್ ತಿಳಿಸಿದ್ದಾರೆ.

ADVERTISEMENT

ಜಾಫರ್ ಷರೀಫ್ ವಿರುದ್ಧಶಿಸ್ತುಕ್ರಮಕ್ಕೆ ಶಿಫಾರಸು

ಬೆಂಗಳೂರು, ಜುಲೈ 27– ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಪಿ.ವಿ. ನರಸಿಂಹ ರಾವ್ ಅವರ ನಾಯಕತ್ವವನ್ನು ಪ್ರಶ್ನಿಸುತ್ತಿರುವ ಮಾಜಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಜಂಟಿ ಕಾರ್ಯದರ್ಶಿ ಸುರೀಂದರ್ ಸಿಂಗ್ ಠಾಕೂರ್ ಅವರು ಇಂದು ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.