ADVERTISEMENT

50 ವರ್ಷಗಳ ಹಿಂದೆ| ಬುಧವಾರ 21-7-1971

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 19:31 IST
Last Updated 20 ಜುಲೈ 2021, 19:31 IST
   

ಪಕ್ಷಾಂತರಕ್ಕೆ ವೀರೇಂದ್ರ ಸೇರಿ ಹಲವರ ತವಕ

ನವದೆಹಲಿ, ಜುಲೈ 20– ಸಂಸ್ಥಾ ಕಾಂಗ್ರೆಸ್ಸಿನ ಬಹುಪಾಲು ಎಲ್ಲ ಪ್ರಮುಖ ಘಟಾನುಘಟಿ ನಾಯಕರು ಆಡಳಿತ ಕಾಂಗ್ರೆಸ್ಸನ್ನು ಸೇರಿಕೊಳ್ಳಲು ಕಾತರದಿಂದಿರುವಂತೆ ಕಾಣುತ್ತದೆ.

ಇಂದಿರಾ ಗಾಂಧಿ ಅವರ ಪಕ್ಷಕ್ಕೆ ಸೇರಿಕೊಳ್ಳಲು ಆದಷ್ಟು ಲಾಭದಾಯಕ ಷರತ್ತುಗಳಿಗಾಗಿ ಅವರೆಲ್ಲ ವೈಯಕ್ತಿಕವಾಗಿ ಯತ್ನಿಸುತ್ತಿದ್ದಾರೆ. ಪಕ್ಷಾಂತರಕ್ಕೆ ಒಟ್ಟಿಗೆ ಸಂಧಾನ ನಡೆಸುವುದು ಅವರ ಅಪೇಕ್ಷೆ
ಯಾಗಿತ್ತು. ಆದರೆ ಅದು ಕೈಗೂಡಲಿಲ್ಲ.

ADVERTISEMENT

ಶ್ರೀಮತಿ ಗಾಂಧಿ ಅವರ ಪಕ್ಷದೊಡನೆ ಪುನರ್ಮಿಲನಕ್ಕೆ ತಮ್ಮ ಸತ್‌ ಪ್ರಭಾವ ಬೀರಬೇಕೆಂದು ಕೇಳಲು, ಮೈಸೂರಿನ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಕೆಲವೇ ವಾರಗಳ ಹಿಂದೆ ಡಿ.ಪಿ. ಮಿಶ್ರಾ ಅವರನ್ನು ಸಂಧಿಸಿದ್ದರು.

ಯಾವ ನಿರ್ದಿಷ್ಟ ಆಶ್ವಾಸನೆಯನ್ನೂ ಕೊಡದೆ ಮಿಶ್ರಾ ಅವರು ಪಾಟೀಲರ ಅಪೇಕ್ಷೆಯನ್ನು ಇಂದಿರಾ ಗಾಂಧಿ ಅವರಿಗೆ ತಿಳಿಸಿದರು. ಇಲ್ಲಿನವರೆಗೆ ಶ್ರೀಮತಿ ಗಾಂಧಿ ಯಾವ ಉತ್ತರವನ್ನೂ ಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.