ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಐದು ವರ್ಷಗಳಲ್ಲಿ ₹ 589 ಕೋಟಿ ಗಳಿಸಿದ್ದಾರೆ. ಚುನಾವಣಾ ನಾಮಪತ್ರ ಸಲ್ಲಿಸುವಾಗ ಅವರು ಇದನ್ನು ಘೋಷಿಸಿಕೊಂಡಿದ್ದಾರೆ. 2013ರ ಚುನಾವಣೆಯಲ್ಲಿ ಶಿವಕುಮಾರರ ಆಸ್ತಿ ₹ 251 ಕೋಟಿ ಇದ್ದದ್ದು, 2018ರಲ್ಲಿ ₹ 840 ಕೋಟಿಗೆ ಏರಿದೆ.
ವರ್ಷಕ್ಕೆ 365 ದಿನಗಳಂತೆ 5 ವರ್ಷಕ್ಕೆ 1825 ದಿನಗಳಾಗುತ್ತವೆ. ಅಂದರೆ ಸಚಿವರು ದಿನವೊಂದಕ್ಕೆ ಗಳಿಸಿದ್ದು ಸುಮಾರು ₹ 32 ಲಕ್ಷ. ಪ್ರತಿ ಗಂಟೆಗೆ ಒಂದು ಲಕ್ಷ ರೂಪಾಯಿಗೂ ಹೆಚ್ಚು! ಇಂಧನ ಸಚಿವರಿಗೆ ಇಷ್ಟೊಂದು ‘ಎನರ್ಜಿ’ ದೊರೆತದ್ದು ಎಲ್ಲಿಂದ? ಈ ಪ್ರಮಾಣದ ಗಳಿಕೆಯ ಗುಟ್ಟೇನು? ನಮಗೂ ಸ್ವಲ್ಪ ಹೇಳಿದರೆ ಕರ್ನಾಟಕ ರಾಜ್ಯದ ಪ್ರಜೆಗಳಾದ ನಾವೂ ಅವರಂತೆ ಗಳಿಸಿ ಕರ್ನಾಟಕವನ್ನು ಸಿರಿವಂತಗೊಳಿಸುತ್ತೇವೆ.
ಸುಭಾಸ ಯಾದವಾಡ, ವಿಜಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.