ADVERTISEMENT

Photos| 2021ರಲ್ಲಿ ವಿಶ್ವದಲ್ಲೇ ಹೆಚ್ಚು ಮೆಚ್ಚುಗೆ ಪಡೆದ ಪುರುಷರಿವರು: ಪ್ರಧಾನಿ ಮೋದಿಗೆ ಎಷ್ಟನೇ ಸ್ಥಾನ?

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರರಾದ ವಿಶ್ವದ ಅಗ್ರ ಹತ್ತು ಪುರುಷರ ಪಟ್ಟಿ ಇಲ್ಲಿದೆ.

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 10:24 IST
Last Updated 16 ಡಿಸೆಂಬರ್ 2021, 10:24 IST
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರರಾದ ವಿಶ್ವದ ಅಗ್ರ ಹತ್ತು ಪುರುಷರ ಪಟ್ಟಿ ಇಲ್ಲಿದೆ. 
ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರರಾದ ವಿಶ್ವದ ಅಗ್ರ ಹತ್ತು ಪುರುಷರ ಪಟ್ಟಿ ಇಲ್ಲಿದೆ.    
‘ಯೂ ಗವ್‌’ನ (YouGov) ಅಂತರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಚೀನೀ ಉದ್ಯಮಿ ಜಾಕ್ ಮಾ ಅವರು 2021 ರಲ್ಲಿ ವಿಶ್ವದಲ್ಲೇ ಹೆಚ್ಚು ಮೆಚ್ಚುಗೆ ಪಡೆದ ಹತ್ತನೇ ವ್ಯಕ್ತಿಯಾಗಿದ್ದಾರೆ. (ಎಎಫ್‌ಪಿ ಚಿತ್ರ)
ರಷ್ಯಾದ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ಗೆ ಈ ಪಟ್ಟಿಯಲ್ಲಿ 9ನೇ ಸ್ಥಾನ (ರಾಯಿಟರ್ಸ್‌)
ಟಾಪ್ 10 ಪಟ್ಟಿಯಲ್ಲಿರುವ ಏಕೈಕ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮಾತ್ರ. ಮೋದಿ ಅವರಿಗೆ 8ನೇ ಸ್ಥಾನ ಸಿಕ್ಕಿದೆ.
ಅರ್ಜೆಂಟೀನಾದ ಅರ್ಜೆಂಟೀನಾದ ಫುಟ್‌ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ (ರಾಯಿಟರ್ಸ್‌) ಆಟಗಾರ ಲಿಯೋನೆಲ್ ಮೆಸ್ಸಿ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ (ರಾಯಿಟರ್ಸ್‌)
ಅಮೆರಿಕದ ವಾಣಿಜ್ಯೋದ್ಯಮಿ ಎಲೋನ್ ಮಸ್ಕ್ ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಸ್ಥಾನ ಪಡೆದಿದ್ದಾರೆ. ಕಳೆದ ಸಲ 9ನೇ ಸ್ಥಾನದಲ್ಲಿದ್ದ ಅವರು, ಈ ಬಾರಿ 6ನೇ ಸ್ಥಾನಕ್ಕೆ ಏರಿದ್ದಾರೆ (ರಾಯಿಟರ್ಸ್‌)
ಬಹುಮುಖ ಪ್ರತಿಭೆ ಜಾಕಿ ಚಾನ್ ಐದನೇ ಸ್ಥಾನದಲ್ಲಿದ್ದಾರೆ. (ರಾಯಿಟರ್ಸ್‌)
ಪೋರ್ಚುಗೀಸ್‌ನ ಸ್ಟೈಲಿಶ್ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಈ ವರ್ಷ ‘ಯೂಗವ್‌’ನ ಅಂತರರಾಷ್ಟ್ರೀಯ ಸಮೀಕ್ಷೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. (ಎಎಫ್‌ಪಿ)
ಚೀನಾದ ಪ್ರಧಾನಿ ಕ್ಸಿ ಜಿನ್‌ಪಿಂಗ್ ಮೂರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. (ಎಪಿ ಚಿತ್ರ)
‘ಯುಗವ್‌’ನ ಸಮೀಕ್ಷೆಯಲ್ಲಿ ದೀರ್ಘ ಕಾಲದ ವರೆಗೆ ಮೊದಲ ಸ್ಥಾನದಲ್ಲಿದ್ದ ಬಿಲ್ ಗೇಟ್ಸ್ ಈ ವರ್ಷ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. (ರಾಯಿಟರ್ಸ್)
ಸಮೀಕ್ಷೆಯಲ್ಲಿ ಬರಾಕ್ ಒಬಾಮಾ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿಯಾಗಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. (ರಾಯಿಟರ್ಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.