ADVERTISEMENT

ಯೂರೊ ಕಪ್ ಫುಟ್‌ಬಾಲ್‌: ಪ್ರೀಕ್ವಾರ್ಟರ್‌ಫೈನಲ್‌ಗೆ ನೆದರ್ಲೆಂಡ್ಸ್

ಏಜೆನ್ಸೀಸ್
Published 18 ಜೂನ್ 2021, 13:41 IST
Last Updated 18 ಜೂನ್ 2021, 13:41 IST
ನೆದರ್ಲೆಂಡ್ಸ್‌ನ ಮೆಂಫಿಸ್‌ ಡಿಪೇ (ಎಡ) ಹಾಗೂ ಆಸ್ಟ್ರಿಯಾದ ಅಲೆಕ್ಸಾಂಡರ್‌ ಡ್ರ್ಯಾಗೊವಿಕ್ ನಡುವೆ ಚೆಂಡಿಗಾಗಿ ಪೈಪೋಟಿ– ಎಎಫ್‌ಪಿ ಚಿತ್ರ
ನೆದರ್ಲೆಂಡ್ಸ್‌ನ ಮೆಂಫಿಸ್‌ ಡಿಪೇ (ಎಡ) ಹಾಗೂ ಆಸ್ಟ್ರಿಯಾದ ಅಲೆಕ್ಸಾಂಡರ್‌ ಡ್ರ್ಯಾಗೊವಿಕ್ ನಡುವೆ ಚೆಂಡಿಗಾಗಿ ಪೈಪೋಟಿ– ಎಎಫ್‌ಪಿ ಚಿತ್ರ   

ಆ್ಯಮ್‌ಸ್ಟರ್‌ಡ್ಯಾಮ್‌, ನೆದರ್ಲೆಂಡ್ಸ್: ಮೆಂಫಿಸ್ ಡಿಪೇ ಪೆನಾಲ್ಟಿ ಅವಕಾಶದಲ್ಲಿ ಗಳಿಸಿದ ಗೋಲು ಹಾಗೂ ಡೆಂಜೆಲ್‌ ಡುಂಫ್ರೈಸ್‌ ಅವರ ಆಟದ ಬಲದಿಂದ ನೆದರ್ಲೆಂಡ್ಸ್ ತಂಡವು ಯೂರೊ ಕಪ್ ಫುಟ್‌ಬಾಲ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು. ಗುರುವಾರ ರಾತ್ರಿ ಇಲ್ಲಿ ನಡೆದ ‘ಸಿ‘ ಗುಂಪಿನ ‍ಪಂದ್ಯದಲ್ಲಿ 2–0ಯಿಂದ ಆಸ್ಟ್ರಿಯಾ ತಂಡವನ್ನು ಪರಾಭವಗೊಳಿಸಿತು.

ಪಂದ್ಯದ 11ನೇ ನಿಮಿಷದಲ್ಲಿ ಆಸ್ಟ್ರಿಯಾ ತಂಡದ ಡೇವಿಡ್‌ ಅಲಾಬಾ ಎಸಗಿದ ಪ್ರಮಾದಿಂದಾಗಿ ನೆದರ್ಲೆಂಡ್ಸ್ ತಂಡಕ್ಕೆ ಪೆನಾಲ್ಟಿ ಅವಕಾಶ ದೊರೆಯಿತು. ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ಡಿಪೇ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.

ಪಂದ್ಯದ 67ನೇ ನಿಮಿಷದಲ್ಲಿ ಯಶಸ್ವಿಯಾದ ಡೆಂಜೆಲ್‌ ಡುಂಫ್ರೈಸ್‌ ಆತಿಥೇಯ ತಂಡವು 2–0 ಮುನ್ನಡೆ ಗಳಿಸಲು ಕಾರಣರಾದರು. ತಿರುಗೇಟು ನೀಡುವ ಆಸ್ಟ್ರಿಯಾ ತಂಡದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ADVERTISEMENT

ಟೂರ್ನಿಯಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಇದು ಸತತ ಎರಡನೇ ಜಯ. ಮೊದಲ ಪಂದ್ಯದಲ್ಲಿ 3–2ರಿಂದ ಉಕ್ರೇನ್ ತಂಡವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿಯೂ ಡುಂಫ್ರೈಸ್‌ ಒಂದು ಗೋಲು ಹೊಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.