ADVERTISEMENT

ರೂಟ್ಸ್‌ ತಂಡಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 18:02 IST
Last Updated 16 ಸೆಪ್ಟೆಂಬರ್ 2021, 18:02 IST
ರೂಟ್ಸ್ ಎಫ್‌ಸಿ ತಂಡದ ಮೈಥಿಲಿ (ಬಲ) ಹಾಗೂ ಜಿಆರ್‌ಕೆ ಗರ್ಲ್ಸ್ ಎಫ್‌ಸಿ ತಂಡದ ವೈಷ್ಣವಿ ಸುಭಾಷ್ ಅವರು ಚೆಂಡಿನ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸಿದರು– ಪ್ರಜಾವಾಣಿ ಚಿತ್ರ
ರೂಟ್ಸ್ ಎಫ್‌ಸಿ ತಂಡದ ಮೈಥಿಲಿ (ಬಲ) ಹಾಗೂ ಜಿಆರ್‌ಕೆ ಗರ್ಲ್ಸ್ ಎಫ್‌ಸಿ ತಂಡದ ವೈಷ್ಣವಿ ಸುಭಾಷ್ ಅವರು ಚೆಂಡಿನ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೈಥಿಲಿ ಗಳಿಸಿದ ಹ್ಯಾಟ್ರಿಕ್ ಗೋಲುಗಳು ರೂಟ್ಸ್ ಫುಟ್‌ಬಾಲ್ ಸ್ಕೂಲ್ ತಂಡದ ಗೆಲುವಿಗೆ ಕಾರಣವಾದವು. ಅವರ ಆಟದ ಬಲದಿಂದ ಇಲ್ಲಿ ನಡೆಯುತ್ತಿರುವ ಕೆಎಸ್‌ಎಫ್‌ಎ ಸ್ಪೋರ್ಟಿಂಗ್ ಪ್ಲಾನೆಟ್‌ ಮಹಿಳೆಯರ ‘ಎ‘ ಡಿವಿಷನ್ ಲೀಗ್ ಟೂರ್ನಿಯಲ್ಲಿ ಆ ತಂಡವು 7–1ರಿಂದ ಜಿಆರ್‌ಕೆ ಎಫ್‌ಸಿ ತಂಡವನ್ನು ಸೋಲಿಸಿತು. ಮೈಥಿಲಿ 12, 37 ಮತ್ತು 42ನೇ ನಿಮಿಷಗಳಲ್ಲಿ ವಿಜೇತ ತಂಡದ ಪರ ಯಶಸ್ಸು ಸಾಧಿಸಿದರು. ಸಂಜನಾ (13 ಮತ್ತು 60ನೇ ನಿ.), ಶ್ರಾವ್ಯಾ (24ನೇ ನಿ.) ಮತ್ತು ತ್ರೀಶಾ (54ನೇ ನಿ.) ಮಿಂಚಿದರು. ಜಿಆರ್‌ಕೆ ತಂಡದ ರುಚಿ (59ನೇ ನಿ.) ಏಕೈಕ ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಪಿಎಎಸ್‌ಎಸ್‌ ಎಫ್‌ಸಿ 3–2ರಿಂದ ಯುನೈಟೆಡ್‌ ಎಫ್‌ಸಿ ಕೊಡಗು ತಂಡವನ್ನು ಸೋಲಿಸಿತು. ವಿಜೇತ ತಂಡದ ರಫಿಯಾ (36 ಮತ್ತು 44ನೇ ನಿ.) ಗುಂಜನ್‌ (14ನೇ ನಿ.) ಗೋಲು ಹೊಡೆದರೆ, ಕೊಡಗು ತಂಡದ ಪರ ಹರ್ಷಾ (30+1), ತನು ವಿಜಯ್ ಗಾವಡೆ (42ನೇ ನಿ.) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT