ADVERTISEMENT

ಮಹಿಳಾ ಫುಟ್‌ಬಾಲ್‌: ಅಮೆರಿಕಕ್ಕೆ ನಿರಾಸೆ

ಏಜೆನ್ಸೀಸ್
Published 22 ಜುಲೈ 2021, 3:52 IST
Last Updated 22 ಜುಲೈ 2021, 3:52 IST
ಸ್ವೀಡನ್‌ನ ಮೆಡೆಲಿನ್ ಜನೋಗಿ (ಎಡ) ಮತ್ತು ಅಮೆರಿಕದ ಟೀರ್ನಾ ಡೇವಿಡ್ಸನ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದ ಸಂದರ್ಭ –ರಾಯಿಟರ್ಸ್ ಚಿತ್ರ
ಸ್ವೀಡನ್‌ನ ಮೆಡೆಲಿನ್ ಜನೋಗಿ (ಎಡ) ಮತ್ತು ಅಮೆರಿಕದ ಟೀರ್ನಾ ಡೇವಿಡ್ಸನ್‌ ಅವರು ಚೆಂಡಿಗಾಗಿ ಪೈಪೋಟಿ ನಡೆಸಿದ ಸಂದರ್ಭ –ರಾಯಿಟರ್ಸ್ ಚಿತ್ರ   

ಟೋಕಿಯೊ: ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡ ಎಂದೇ ಬಿಂಬಿತವಾಗಿದ್ದ ಅಮೆರಿಕ ಮಹಿಳಾ ಫುಟ್‌ಬಾಲ್ ತಂಡ ಒಲಿಂಪಿಕ್ಸ್‌ನ ಮೊದಲ ಪಂದ್ಯದಲ್ಲೇ ಆಘಾತ ಕಂಡಿದೆ. ಬುಧವಾರ ನಡೆದ ಹಣಾಹಣಿಯಲ್ಲಿ ನಾಲ್ಕು ಬಾರಿಯ ಚಾಂಪಿಯನ್ನರನ್ನು ಸ್ವೀಡನ್ 3–0ಯಿಂದ ಮಣಿಸಿತು.

ಸ್ಟಿನಾ ಬ್ಲ್ಯಾಕ್‌ಸ್ಟೆನಿಯಸ್ ಎರಡು ಗೋಲು ಗಳಿಸಿದರೆ ಬದಲಿ ಆಟಗಾರ್ತಿ ಲೀನಾ ಹುರ್ಟಿಗ್‌ ಒಂದು ಗೋಲು ಗಳಿಸಿ ಸ್ವೀಡನ್‌ ಜಯಕ್ಕೆ ಕಾರಣರಾದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸ್ವೀಡನ್ ಬೆಳ್ಳಿ ಪದಕ ಗಳಿಸಿತ್ತು. ಈ ಪಂದ್ಯದ ಸೋಲಿನೊಂದಿಗೆ ಅಮೆರಿಕದ 44 ಪಂದ್ಯಗಳ ಅಜೇಯ ಓಟಕ್ಕೆ ತೆರೆ ಬಿತ್ತು.

ವಿವಿಯಾನಿ ಮೀಡಿಯಾಮ ಗಳಿಸಿದ ನಾಲ್ಕು ಗೊಳುಗಳ ಬಲದಿಂದ ಜಾಂಬಿಯಾವನ್ನು 10–3ರಲ್ಲಿ ನೆದರ್ಲೆಂಡ್ಸ್ ಮಣಿಸಿತು. ಒಲಿಂಪಿಕ್ಸ್‌ನ ಮಹಿಳಾ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಕಂಡ ಪಂದ್ಯ ಇದಾಯಿತು. ಲೀಕ್ ಮರ್ಟೆನ್ಸ್‌ ಎರಡು, ಶಾನಿಸ್‌ ವ್ಯಾನ್ ಸ್ಯಾಂಡೆನ್‌, ಜಿಲ್ ರೂರ್ಡ್‌, ಲಿನೆತ್ ಬೀರೆನ್‌ಸ್ಟೈನ್‌ ಮತ್ತು ವಿಕ್ಟೋರಿಯಾ ‍ಪೆವ್ಲೊಲ ತಲಾ ಒಂದೊಂದು ಗೋಲು ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.