ADVERTISEMENT

ಅಯೋಧ್ಯೆ ವಿವಾದ: ಮುಸ್ಲಿಂ ಕಕ್ಷಿದಾರರಿಗೆ ಮಾತ್ರ ಪ್ರಶ್ನೆ ಏಕೆ?

ಅಂತಿಮ ಹಂತದಲ್ಲಿ ಅಯೋಧ್ಯೆ ವಿವಾದ ವಿಚಾರಣೆ

ಪಿಟಿಐ
Published 14 ಅಕ್ಟೋಬರ್ 2019, 20:01 IST
Last Updated 14 ಅಕ್ಟೋಬರ್ 2019, 20:01 IST
   

ನವದೆಹಲಿ: ಹಿಂದೂ ಕಕ್ಷಿದಾರರಿಗೆ ಹೋಲಿಸಿದರೆ, ತಮಗೆ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ವಿಚಾರಣೆ ವೇಳೆ ಮುಸ್ಲಿಂ ಕಕ್ಷಿದಾರರು ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದ ಎದುರು ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್ ಧವನ್ ಅವರು ಈ ಆರೋಪ ಮಾಡಿದ್ದಾರೆ.

ಸೋಮವಾರ 38ನೇ ದಿನದ ಕಲಾಪ ನಡೆಯಿತು.ರಾಮ್ ಲಲ್ಲಾ ಪರ ವಕೀಲ ಸಿ.ಎಸ್. ವೈದ್ಯನಾಥನ್ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ರಾಮ್ ಲಲ್ಲಾ ಪ್ರತಿನಿಧಿಸುವ ಮತ್ತೊಬ್ಬ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್ ಕೆ. ಪರಾಶರನ್ ಅವರೂ ಆರೋಪವನ್ನು ಅಲ್ಲಗಳೆದರು. ಇಂತಹ ಹೇಳಿಕೆ ನೀಡುವ ಮೂಲಕ ತುಂಬಿದ ನ್ಯಾಯಾಲಯದಲ್ಲಿ ಗಮನ ಸೆಳೆಯಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ADVERTISEMENT

‘ಪ್ರಾರ್ಥನಾ ಸ್ಥಳ ಪ್ರವೇಶಿಸಲು ಹಿಂದೂಗಳಿಗೆ ಮಾತ್ರ ಹಕ್ಕಿದೆ. ಅಂದಮಾತ್ರಕ್ಕೆ ಅವರಿಗೆ ವಿವಾದಿತ ಸ್ಥಳದ ಮಾಲೀಕತ್ವ ದೊರೆತಂತಾಗುವುದಿಲ್ಲ’ ಎಂಬ ಧವನ್ ಅವರ ವಾದವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.