ಭಾಲ್ಕಿ: ಕೃಷಿ ಕ್ಷೇತ್ರದಲ್ಲಿ ಫಲೋತ್ಪಾದನೆ ಮತ್ತು ಅಧಿಕ ಇಳುವರಿ ಬೆಳೆಗಳನ್ನು ಬೆಳೆಸಿ ರೈತರ ಸ್ವಾವಲಂಬಿ ಜೀವನಕ್ಕೆ ಆಧಾರಸ್ತಂಭ ಯೋಜನೆಗಳನ್ನು ಹಮ್ಮಿಕೊಂಡಿರುವ ತಾಲ್ಲೂಕಿನ ಅಹಮದಾಬಾದ್ ಗ್ರಾಮದ ಕ್ರಾಂತಿ ರವೀಂದ್ರ ಮೋರೆ ಅವರ ಕೃಷಿ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಮಹಾರಾಷ್ಟ್ರ ಸರ್ಕಾರ ಪದ್ಮಶ್ರೀ ಡಾ.ವಿಠಲರಾವ್ ವಿಕೆ ಪಾಟೀಲ ಕೃಷಿ ಸೇವಾರತ್ನ ಪುರಸ್ಕಾರ ನೀಡಿ ಗೌರವಿಸಿದೆ.
ಕ್ರಾಂತಿ ಮೋರೆ ಅವರು ಮಹಾರಾಷ್ಟ್ರದ ಅಹಮದ್ ನಗರದ ಪ್ರಾದೇಶಿಕ ಸಕ್ಕರೆ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕ್ರಾಂತಿ ಅವರು ಲಾಕ್‍ಡೌನ್ ಅವಧಿ ಯಲ್ಲಿ ಮಹಿಳೆಯರು ತಾವು ಉತ್ಪಾದಿಸಿದ ತರಕಾರಿ ಮತ್ತು ಫಲಪುಷ್ಪಗಳನ್ನು ಸ್ವತಃ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅಧಿಕ ಸಂಪಾದನೆ ಹೇಗೆ ಮಾಡಿಕೊಳ್ಳಬೇಕು. ಪಶು ಸಂಗೋಪನೆ ಮತ್ತು ಮತ್ಸ್ಯಕೃಷಿ ಮೂಲಕ
ಹೇಗೆ ಮಹಿಳೆಯರು ಕುಟುಂಬಕ್ಕೆ ಆಧಾರ ಸ್ತಂಭರಾಗುತ್ತಾರೆ ಎಂಬು ದನ್ನು ತೋರಿಸಿಕೊಟ್ಟಿದ್ದಾರೆ. ಹಾಗೆಯೇ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಹೇಗೆ ಸದುಪಯೋಗ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸವಿವರ ಮಾಹಿತಿ ಕಲೆ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.