ADVERTISEMENT

ಕುಂಚ ಕಲಾ ತಪಸ್ವಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 19:30 IST
Last Updated 4 ಫೆಬ್ರುವರಿ 2011, 19:30 IST
ಕುಂಚ ಕಲಾ ತಪಸ್ವಿ
ಕುಂಚ ಕಲಾ ತಪಸ್ವಿ   

ತಿಪ್ಪಾಜಿ ಚಿತ್ರಗಾರ್ ಆರ್ಟ್ ಫೌಂಡೇಷನ್ ಮತ್ತು ರಸ ಗ್ಯಾಲರಿ: ಶನಿವಾರ ಸಂಜೆ 4.30ಕ್ಕೆ ತಿಪ್ಪಾಜಿ ಚಿತ್ರಗಾರ್ ಅವರ ಮೂಲ ಕಲಾಕೃತಿಗಳ ಪ್ರದರ್ಶನ ಉದ್ಘಾಟನೆ, ಸಾಂಪ್ರದಾಯಿಕ ಚಿತ್ರ ಕಲಾವಿದ ಜಿ.ಎಲ್. ಎನ್. ಸಿಂಹ ಅವರಿಗೆ 2011ನೇ ಸಾಲಿನ ‘ಕುಂಚ ಕಲಾ ತಪಸ್ವಿ’  ಪ್ರಶಸ್ತಿ ಪ್ರದಾನ. ಉದ್ಘಾಟನೆ: ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಜೆ.ಎಸ್. ಖಂಡೆರಾವ್, ಅತಿಥಿಗಳು: ಕೆ. ಚಂದ್ರನಾಥ್ ಆಚಾರ್ಯ, ಎನ್. ಮರಿಶಾಮಾಚಾರ್, ಅಧ್ಯಕ್ಷತೆ: ಕೆ. ಜ್ಞಾನೇಶ್ವರ್.

ಶಿವಮೊಗ್ಗ ಜಿಲ್ಲೆಯ ತಿಪ್ಪಾಜಿ ಚಿತ್ರಗಾರ್ 19ನೇ ಶತಮಾನದ ಕರ್ನಾಟಕದ ಪ್ರಮುಖ ಚಿತ್ರ ಕಲಾವಿದರು. ಇಲ್ಲಿನ ಕಲಾವಿದರು ತಂಜಾವೂರ್ ಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾಗ ಹೊಯ್ಸಳ ವಾಸ್ತುಶಿಲ್ಪ, ಕಲೆಯಿಂದ ಪ್ರೇರಿತರಾಗಿ ಹೊಸದೊಂದು ಶೈಲಿಯ ರೇಖಾಚಿತ್ರ, ಕಲಾಕೃತಿಗಳನ್ನು ರಚಿಸಿದರು. ಕರ್ನಾಟಕದಲ್ಲಿ ಹೊಸ ಬಗೆಯ ಕಲಾ ಪರಂಪರೆಯ ಹುಟ್ಟಿಗೆ ಕಾರಣರಾದರು. ಚಿತ್ರಕಲೆಯಂತೆ ಅವರು ರಚಿಸಿದ ಕಾಷ್ಠಶಿಲ್ಪ ಕಲಾಕೃತಿಗಳು ಅಷ್ಟೇ ಪ್ರಸಿದ್ಧಿ ಪಡೆದಿವೆ.

ತಿಪ್ಪಾಜಿ ಚಿತ್ರಗಾರ್ ಆರ್ಟ್ ಫೌಂಡೇಷನ್ ಆಯೋಜಿಸಿರುವ ತಿಪ್ಪಾಜಿಯವರ 73 ಅಮೂಲ್ಯ ಕಲಾಕೃತಿಗಳ ಪ್ರದರ್ಶನ ಫೆ. 13ರವರೆಗೆ ನಡೆಯಲಿದೆ.
ಸ್ಥಳ: ಗ್ಯಾಲರಿ ಆಫ್ ರಸ, 93, ಬಿ. ಮುನಿನಾಗಪ್ಪ ಆರ್ಕೇಡ್, 3ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಚಾಮರಾಜಪೇಟೆ. ಬೆಳಿಗ್ಗೆ 10.30ರಿಂದ ಸಂಜೆ 7.30.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.