ADVERTISEMENT

ಸಂಗೀತ ಸಮ್ಮೇಳನದಲ್ಲಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಕರ್ನಾಟಕ ಗಾನ ಕಲಾ ಪರಿಷತ್ತು: ವಿದ್ವಾಂಸರ ಮತ್ತು ಯುವ ಪ್ರತಿಭೆಗಳ 42ನೇ ಸಂಗೀತ ಸಮ್ಮೇಳನದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ಗುರುಗುಹ ಸಂಗೀತ ಮಹಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ. ಕುಲಪತಿ ಡಾ.ಎಸ್.ಸಿ. ಶರ್ಮಾ ಅವರಿಂದ ವಿದ್ವತ್ ಗೋಷ್ಠಿ ಮತ್ತು ವೆಬ್ ಸೈಟ್ ಲೋಕಾರ್ಪಣೆ.

ಗೋಷ್ಠಿಯಲ್ಲಿ ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಬಗ್ಗೆ ಡಾ.ಸಿ.ಎ. ಶ್ರೀಧರ್ ಉಪನ್ಯಾಸ. 11.40ಕ್ಕೆ ರಂಜಿನಿ ಅವರಿಂದ ತಿಲ್ಲಾನಗಳು. 12.20ಕ್ಕೆ ಡಾ.ಕೆ. ವರದರಂಗನ್ (ಕರ್ನಾಟಕ ಸಂಗಿತದಲ್ಲಿ ಮೇಳ ಪದ್ಧತಿ). ಸಂಜೆ 5ಕ್ಕೆ ಮಧು ಕಶ್ಯಪ್ ಅವರಿಂದ ಗಾಯನ.

ಪಕ್ಕವಾದ್ಯದಲ್ಲಿ: ಡಾ.ಬಿ.ಕೆ.ರಘು (ವಯಲಿನ್), ಡಾ.ಬಿ.ಎಸ್.ಆನಂದ್ (ಮೃದಂಗ), ವ್ಯಾಸ ವಿಠಲ (ಖಂಜಿರಾ). 7.15ಕ್ಕೆ ಎಂ.ಎಸ್.ಶೀಲಾ ಅವರಿಂದ ಗಾಯನ.
 

ಪಕ್ಕವಾದ್ಯದಲ್ಲಿ: ಚಾರುಲತಾ ರಾಮಾನುಜಂ (ವಯಲಿನ್), ವಿ.ಕೃಷ್ಣ (ಮೃದಂಗ), ಬಿ.ಎನ್. ಚಂದ್ರಮೌಳಿ (ಖಂಜಿರಾ).

ಶುಕ್ರವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರು ವಿವಿ ಪ್ರದರ್ಶಕ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ. 11ಕ್ಕೆ `ಸಂತ ತ್ಯಾಗರಾಜರ ಕೃತಿಗಳಲ್ಲಿ ರಾಮಾಯಾಣದ ಪಾತ್ರಗಳು~ ಕುರಿತು ನಾಗೇಂದ್ರ ಶಾಸ್ತ್ರಿ ಉಪನ್ಯಾಸ.
 
`ವಿಶಿಷ್ಟ ತಾಳವಾದ್ಯ ಖಂಜಿರಾ~ ಕುರಿತು ಬಿ.ಎನ್.ಚಂದ್ರಮೌಳಿ, ವ್ಯಾಸವಿಠಲ, ಎ.ಎಸ್.ಎನ್.ಸ್ವಾಮಿ ಗೋಷ್ಠಿ. ಸಂಜೆ 7ಕ್ಕೆ ಎಂ.ಎಸ್.
 
ವಿದ್ಯಾ ಅವರಿಂದ ಗಾಯನ. ಕೆ.ಸತ್ಯಪ್ರಕಾಶ್ (ವಯಲಿನ್), ಬಿ.ಧ್ರುವರಾಜ್ (ಮೃದಂಗ), ಟಿ.ಎನ್.ರಮೇಶ್ (ಘಟ). ನಂತರ  ಡಾ.ಸಿ.ಎ.ಶ್ರೀಧರ್ ಅವರಿಂದ ಕೊಳಲು ವಾದನ. ನಳಿನಾ ಮೋಹನ್ (ವಯಲಿನ್), ಶಿವಶಂಕರ್ ಸ್ವಾಮಿ ಎಚ್.ಎಲ್ (ಮೃದಂಗ), ರಾಮಾನುಜನ್ ಟಿ.ಎ. (ಮೋರ್ಚಿಂಗ್).

ಸ್ಥಳ: ಗಾಯನ ಸಮಾಜ, ಕೆ.ಆರ್.ರಸ್ತೆ.


 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.