ADVERTISEMENT

ಬೆಂಗಳೂರು ಚಿತ್ರ ಕಲಾ ಪರಿಷತ್‌ನಲ್ಲಿ 'ಆರ್ಟ್‌ ಅಂಡ್ ಕ್ರಾಫ್ಟ್‌ ಮೇಳ'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 20:00 IST
Last Updated 24 ಡಿಸೆಂಬರ್ 2021, 20:00 IST
ಬೆಂಗಳೂರು ಆರ್ಟ್‌ ಅಂಡ್ ಕ್ರಾಫ್ಟ್ ಮೇಳ
ಬೆಂಗಳೂರು ಆರ್ಟ್‌ ಅಂಡ್ ಕ್ರಾಫ್ಟ್ ಮೇಳ   

ದೇಶದ ವಿವಿಧ ರಾಜ್ಯಗಳಲ್ಲಿರುವ ಕರಕುಶಲ ಕರ್ಮಿಗಳ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಸಲುವಾಗಿ ಬೆಂಗಳೂರಿನ ಚಿತ್ರ ಕಲಾ ಪರಿಷತ್‌ನಲ್ಲಿ ಡಿಸೆಂಬರ್ 24ರಿಂದ ‘ಬೆಂಗಳೂರು ಆರ್ಟ್‌ ಅಂಡ್ ಕ್ರಾಫ್ಟ್‌ ಮೇಳ’ ಆರಂಭವಾಗಿದೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಈ ಮೇಳ ಜನವರಿ 2, 2022ರವರೆಗೆ ನಡೆಯಲಿದೆ.ಬೆಳಿಗ್ಗೆ 11 ರಿಂದ ಸಂಜೆ7 ಗಂಟೆಯವರೆಗೆ ನಡೆಯುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಪ್ರವೇಶ ಉಚಿತ.

ಮೇಳದಲ್ಲಿ 80 ಕ್ಕೂ ಹೆಚ್ಚು ಮಳಿಗೆಗಳಿವೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕರಕುಶಲ ಕರ್ಮಿಗಳು ತಮ್ಮ ಕಲಾಕೃತಿಗಳು ಹಾಗೂ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದ್ದಾರೆ.ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಅಗತ್ಯವಿರುವ ಅಲಂಕಾರಿಕ ವಸ್ತುಗಳು ಇಲ್ಲಿ ಲಭ್ಯ. ಆಟಿಕೆಗಳು, ಉಡುಪುಗಳಿವೆ. ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಯ ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.