ADVERTISEMENT

ಗೊಂಬೆಗಳ ಜೊತೆಯಲ್ಲಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:30 IST
Last Updated 9 ನವೆಂಬರ್ 2019, 19:30 IST
ಚಿತ್ರ: ಸುರಭಿ ಶೆಟ್ಟಿಗಾರ್
ಚಿತ್ರ: ಸುರಭಿ ಶೆಟ್ಟಿಗಾರ್   

ನನಗೆ ಗೊಂಬೆಗಳೆಂದರೆ ತುಂಬಾ ಇಷ್ಟ. ನನ್ನ ಬಳಿ ಬಾರ್ಬಿ, ಹಲ್ಲೋ ಕಿಟ್ಟಿ ಸೇರಿದಂತೆ ಸುಮಾರು 20 ಗೊಂಬೆಗಳಿವೆ. ಪುಟ್ಟ ಮನೆಯೊಳಗೆ ಈ ಗೊಂಬೆಗಳನ್ನು ಅಂದವಾಗಿ ಜೋಡಿಸಿ ಅವುಗಳನ್ನು ಅಲಂಕರಿಸುತ್ತೇನೆ.

ಬಣ್ಣಬಣ್ಣದ ಉಡುಗೆಗಳನ್ನು ತೊಡಿಸುವುದು, ಅವುಗಳ ತಲೆ ಬಾಚುವುದು, ಆಭರಣಗಳಿಂದ ಸಿಂಗರಿಸುವುದು ನನ್ನ ಹವ್ಯಾಸ. ಪುಟ್ಟ ಮನೆಯ ಇನ್ನೊಂದು ಮೂಲೆಯಲ್ಲಿ ಅಡುಗೆ ಕೋಣೆ ಇದೆ. ಮಿಕ್ಸರ್ ಬಳಸಿ ತಯಾರಿಸಿದ ಸಾಂಬಾರ್, ಪಲ್ಯ, ಘೀರೈಸ್‌, ಪಾಯಸ ಮಾಡಿ ನನ್ನ ನೆಚ್ಚಿನ ಗೊಂಬೆಗಳಿಗೆ ತಿನ್ನಿಸುತ್ತೇನೆ. ಬಳಿಕೆ ಗೊಂಬೆಗಳನ್ನೆಲ್ಲಾ ಪುಟ್ಟ ಹಾಸಿಗೆಯಲ್ಲಿ ಜೋಗುಳ ಹಾಡಿ ಮಲಗಿಸುತ್ತೇನೆ. ನಿದ್ದೆಯಿಂದ ಎದ್ದ ಬಳಿಕ ಆ ಗೊಂಬೆಗಳಿಗೆ ಪುಟ್ಟ ಪುಟ್ಟ ಕಪ್–ಸಾಸರ್‌ನಲ್ಲಿ ಚಹಾ–ಕಾಫಿ ಕುಡಿಸುವೆ. ಆ ನಂತರ ಅವುಗಳ ತಲೆ ಬಾಚಿ ಜಡೆ ಹೆಣೆಯುವೆ. ಪುಟ್ಟ ಮನೆಯ ಇನ್ನೊಂದು ಮೂಲೆಯಲ್ಲಿ ಇರುವ ವಾಷಿಂಗ್‌ ಮೆಷಿನ್‌ನಲ್ಲಿ ಬಟ್ಟೆಗಳನ್ನು ಒಗೆದು, ಅವುಗಳನ್ನು ಗೊಂಬೆಗಳಿಗೆ ತೊಡಿಸುತ್ತೇನೆ.

ಬಳಿಕ ಅವುಗಳನ್ನೆಲ್ಲಾ ಶಾಲಾ ಕೊಠಡಿಯಲ್ಲಿ ಕೂರಿಸಿದಂತೆ ಸಾಲಾಗಿ ಕುಳ್ಳಿರಿಸಿ ಪಾಠ ಹೇಳಿ ಕೊಡುತ್ತೇನೆ. ಕಾಮಿಕ್ಸ್‌ ಪುಸ್ತಕದ ಕಥೆಗಳನ್ನು ಹೇಳಿ ಅವುಗಳನ್ನು ರಂಜಿಸುತ್ತೇನೆ. ಕೊನೆಗೆ ಪುಟ್ಟ ಸೈಕಲ್‌ನಲ್ಲಿ ಅವುಗಳೆಲ್ಲವನ್ನೂ ಕೂರಿಸಿ ಮನೆಯ ತುಂಬೆಲ್ಲ ಸುತ್ತಾಡಿಸುವುದರೊಂದಿಗೆ ಗೊಂಬೆಗಳ ಜೊತೆಗಿನ ನನ್ನ ಆಟ ಮುಕ್ತಾಯವಾಗುತ್ತದೆ.

ADVERTISEMENT
ಸುರಭಿ ಶೆಟ್ಟಿಗಾರ್,2ನೇ ತರಗತಿ, ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ, ವಿದ್ಯಾರಣ್ಯಪುರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.