ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾದ ಎಸ್.ಕೆ. ಬಾನು ಮುಷ್ತಾಕ್ ಅವರ ಹೆಸರು ಈಗ ಜಾಗತಿಕ ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ. ಅವರ ‘ಹಾರ್ಟ್ ಲ್ಯಾಂಪ್’ ಕೃತಿಯು ವಿಶ್ವದ ಮೇರು ಸಾಹಿತ್ಯ ಪ್ರಶಸ್ತಿ ಬೂಕರ್‌ನ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ. ವಿಶ್ವದ ಬೇರೆ ಬೇರೆ ಭಾಷೆಯಲ್ಲಿನ 104 ಕೃತಿಗಳ ಪೈಕಿ, ಬಾನು ಮುಷ್ತಾಕ್ ಅವರ ಕೃತಿಯೂ ಸೇರಿದಂತೆ ಆರು ಕೃತಿಗಳು ಮಾತ್ರ ಈ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ. 2025ರ ಮೇ 20ರಂದು ಲಂಡನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ. ಬಾನು ಅವರು ‘ಎದೆಯ ಹಣತೆ’ ಶೀರ್ಷಿಕೆಯಡಿ ಬರೆದಿದ್ದ ಈ ಕೃತಿಯನ್ನು ದೀಪಾ ಭಸ್ತಿಯವರು ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಅನುವಾದಿಸಿದ್ದಾರೆ. ಹಾಸನದಿಂದ ಬೂಕರ್ ಶಾರ್ಟ್‌ಲಿಸ್ಟ್‌ವರೆಗಿನ ಪಯಣವನ್ನು ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಬಾನು ಮುಷ್ತಾಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.