ಕುವೆಂಪು
ಹಗಲಿನಕ್ಷಿ
ಹಗಲನ್ನು ಬೆಳಗುವ ಸೂರ್ಯನನ್ನು ಪಗಲಕರ, ಪಗಲಬಲ್ಲಹ, ಹಗಲಚುಕ್ಕೆ, ಹಗಲಿನ ದೀಪ, ಪಗಲಾಣ್ಮ, ಪಗಲೆರೆಯ, ಹಗಲೊಡೆಯ ಎಂದು ಹಲವು ವಿಧವಾಗಿ ಕನ್ನಡ ಕವಿಗಳು ವರ್ಣಿಸಿದ್ದಾರೆ. ಸೂರ್ಯನು ಪೂರ್ವ ದಿಕ್ಕಿನಲ್ಲಿ ಕಣ್ಣು ತೆರೆಯುವುದರಿಂದ ಜಗತ್ತಿಗೆ ಬೆಳಕಾಗುವುದು. ಹಾಗಾಗಿ ಕುವೆಂಪು ಅವರು ರವಿಯನ್ನು ಹಗಲಿನ ಕಣ್ಣಾಗಿ ಕಂಡು ‘ಹಗಲಿನಕ್ಷಿ’ ಪದ ರಚಿಸಿ ಹೀಗೆ ಚಿತ್ರಿಸಿದ್ದಾರೆ :
ದಿಗುತಟದಲಿ ತೆರೆಯುತಿತ್ತು
ಹಗಲಿನಕ್ಷಿ.
(ಭಾದ್ರಪದದ ಸುಪ್ರಭಾತ - ಪಕ್ಷಿಕಾಶಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.