ADVERTISEMENT

‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯ ಚಿತ್ರ ಬಿಡುಗಡೆ ನಾಳೆ

ಪ್ರಜಾವಾಣಿ ವಿಶೇಷ
Published 27 ಜುಲೈ 2024, 0:28 IST
Last Updated 27 ಜುಲೈ 2024, 0:28 IST
   

ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಬಹುಮುಖ ಪ್ರತಿಭೆ. ಕನ್ನಡ ಸಾಹಿತ್ಯಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರ ಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೆ ಅಲ್ಲದೇ ಪರಿಸರಪ್ರಿಯನಾಗಿ, ಕೃಷಿಕನಾಗಿ, ಸಾಹಿತಿಯಾಗಿ, ಪಕ್ಷಿತಜ್ಞನಾಗಿ, ಅತ್ಯುತ್ತಮ ಛಾಯಾಗ್ರಾಹಕನಾಗಿ, ವಿಜ್ಞಾನಿಯಾಗಿ, ವಿದ್ವಾಂಸನಾಗಿ ಬದುಕನ್ನು ಹಲವು ಮಗ್ಗುಲುಗಳಲ್ಲಿ ಶೋಧಿಸಿ, ತಮ್ಮ ಕೃತಿಗಳಲ್ಲಿ ದಾಖಲಿಸಿದವರು. 

ಹೇಳಿದಷ್ಟೂ ಮುಗಿಯದ ಇಂಥ ಅಪ್ರತಿಮ ಪ್ರತಿಭೆಯ ವ್ಯಕ್ತಿಚಿತ್ರಣವನ್ನು ಕೆಲವು ಸಂಚಿಕೆಗಳಲ್ಲಿ ನಿರೂಪಿಸುವ ಪ್ರಯತ್ನವೇ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ. 

ಈ ಸಾಕ್ಷ್ಯಚಿತ್ರದಲ್ಲಿ ತೇಜಸ್ವಿಯವರ ಬಗ್ಗೆ 30ಕ್ಕೂ ಹೆಚ್ಚು ಗಣ್ಯರು, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ತೇಜಸ್ವಿ ಅವರೊಂದಿಗಿನ ತಮ್ಮ ನೆನಪು, ಅನುಭವಗಳನ್ನು ಹಂಚಿಕೊಂಡಿದ್ದಾರೆ. 

ADVERTISEMENT

ಸಾಕ್ಷ್ಯಚಿತ್ರ ಆರು ಸರಣಿಗಳನ್ನು ಒಳಗೊಂಡಿದೆ. ಜುಲೈ 28ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗಲಿದೆ. ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್‌ ಲೋಕಾರ್ಪಣೆ ಮಾಡಲಿದ್ದಾರೆ. 

‘ತೇಜಸ್ವಿ ಸಾಹಿತ್ಯ  ಮತ್ತು ಸಾಂಸ್ಕೃತಿಕ ಹಬ್ಬ’ ಎರಡು ದಿನಗಳ ಕಾಲ ನಡೆಯಲಿದೆ. ಅತಿಥಿಗಳು: ಬಿ.ಎನ್‌.ಶ್ರೀರಾಂ, ಡಾ.ಕೆ.ಚಿದಾನಂದಗೌಡ, ಡಾ. ವೂಡೇ ಪಿ.ಕೃಷ್ಣ. ಎಸ್‌.ಜಿ.ಸಿದ್ದರಾಮಯ್ಯ. ತಾರಿಣಿ ಚಿದಾನಂದ ಇರಲಿದ್ದಾರೆ.  ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.