ADVERTISEMENT

ಆನೆ ಬಂದಿತ್ತು

ಜಿ.ಎಸ್.ಉಬರಡ್ಕ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST
ಚಿತ್ರ: ಶಿಲ್ಪಾ ಕಬ್ಬಿಣಕಂತಿ
ಚಿತ್ರ: ಶಿಲ್ಪಾ ಕಬ್ಬಿಣಕಂತಿ   

ಆನೆ ಬಂದಿತ್ತು ಮುದ್ದಿನ ಆನೆ ಬಂದಿತ್ತು

ಹುಣ್ಣಿಮೆ ದಿನವೆ ನಿನಾದ ಕಂದನ

ಮನೆ ಬಾಗಿಲಿಗೆ ಆನೆ ಬಂದಿತ್ತು

ADVERTISEMENT

ಸೊಂಡಿಲನಾಡಿಸಿ ಗಂಟೆಯ ಬಾರಿಸಿ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ

ಆನೆ ಬಂದಿತ್ತು ಮುದ್ದಿನ ಆನೆ ಬಂದಿತ್ತು

ಸೊಪ್ಪು ಸೋಗೆ ಕಬ್ಬಿನ ಜಲ್ಲೆ

ಜಗಿಯಲು ಬಂದಿತ್ತು

ಆನೆ ಜಗಿಯಲು ಬಂದಿತ್ತು

ಬೆಲ್ಲದ ಉಂಡೆ ಬಾಳೆಯ ಹಣ್ಣು

ನುಂಗಲು ಬಂದಿತ್ತು

ಆನೆ ನುಂಗಲು ಬಂದಿತ್ತು

ತಿನಿಸನು ಮೆಲ್ಲುತ ಸೊಂಡಿಲನಾಡಿಸಿ

ನಿನಾದ ಕಂದಗೆ ಸಲಾಮು ಹೊಡೆದು

ಮುಂದಕೆ ಸಾಗಿತ್ತು ಆನೆ ಮುಂದಕೆ ಸಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.