ADVERTISEMENT

ಗಿಡುಗ ಕೊಕ್ಕಿನ ಆಮೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2010, 11:45 IST
Last Updated 20 ಡಿಸೆಂಬರ್ 2010, 11:45 IST

ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಾಗರಗಳಲ್ಲಿ ಕಂಡು ಬರುವ ಅಪರೂಪದ ಆಮೆ ಇದು. ನೀರಿನಡಿ ಅದು ಈಜಾಡುತ್ತಿದ್ದರೆ ಗಿಡುಗ ಈಜಾಡಿದಂತೆನಿಸುತ್ತದೆ. ರೆಕ್ಕೆಗಳನ್ನು ಹೋಲುವ ಕಾಲುಗಳು, ಗಿಡುಗನ ಕೊಕ್ಕಿನಂಥ ಬಾಯಿ ಇರುವುದರಿಂದ ಅದಕ್ಕೆ ಗಿಡುಗ ಕೊಕ್ಕಿನ ಆಮೆ ಎಂದು ಹೆಸರು.

ಸಮುದ್ರದಲ್ಲಿ ವಾಸಿಸುವ ಆಮೆಗಳ ಗಾತ್ರಕ್ಕೆ ಹೋಲಿಸಿದರೆ ಇದು ಸಣ್ಣದು. ಸಂಪೂರ್ಣವಾಗಿ ಬೆಳೆದ ಗಿಡುಗ ಕೊಕ್ಕಿನ ಆಮೆ ಒಂದು ಮೀಟರ್ ಉದ್ದ, ಆರು ಸೆಂಟಿಮೀಟರ್ ಅಗಲ ಇರುತ್ತದೆ. ಆಳವಿಲ್ಲದ ಸಮುದ್ರದಲ್ಲಿ ಈಜಾಡುವ ಅದು ಇತರೆ ಆಮೆಗಳಂತೆ ನೀರಿನಾಳಕ್ಕೆ ಹೋಗುವುದೇ ಇಲ್ಲ.

ಸಣ್ಣಮೀನುಗಳು ಮತ್ತು ಜೆಲ್ಲಿಫಿಶ್‌ಗಳನ್ನು ತಿನ್ನುವ ಅವುಗಳ ಕೊಂಡಿಗಳಿಗೆ ಸ್ಪರ್ಶಜ್ಞಾನ ಇದೆ. ಅವು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ತಲೆಯನ್ನು ಚಿಪ್ಪಿನೊಳಗೆ ಸೇರಿಸಿಕೊಂಡು ಎದುರಾಳಿಗಳಿಂದ ರಕ್ಷಿಸಿಕೊಳ್ಳುತ್ತವೆ.

ಚರ್ಮ, ವಿಶಿಷ್ಟ ಚಿಪ್ಪು ಮತ್ತು ಮಾಂಸಕ್ಕಾಗಿ ಅವುಗಳನ್ನು ಕೊಲ್ಲಲಾಗುತ್ತಿದೆ. ಗಿಡುಗ ಕೊಕ್ಕಿನ ಆಮೆಯ ಮಾಂಸದಿಂದ ತಯಾರಿಸುವ ಸೂಪ್ ಐಷಾರಾಮಿ ಖಾದ್ಯಗಳಲ್ಲಿ ಒಂದು. ಅಲಂಕಾರಕ್ಕಾಗಿಯೂ ಅವುಗಳ ಚಿಪ್ಪುಗಳನ್ನು ಬಳಸಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಅವು ತೀರಾ ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದು, ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.