ADVERTISEMENT

ಜೀವ ಜಗತ್ತು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2010, 12:35 IST
Last Updated 20 ಡಿಸೆಂಬರ್ 2010, 12:35 IST

1. ‘ಟೆಡ್ಡಿ ಬೇರ್’ ಎಂದೇ ಪ್ರಸಿದ್ಧವಾಗಿರುವ ಪುಟ್ಟ ಗಾತ್ರದ ಮುದ್ದು ಪ್ರಾಣಿ ಚಿತ್ರ-1ರಲ್ಲಿದೆ. ಆಸ್ಟ್ರೇಲಿಯದಲ್ಲಷ್ಟೇ ನೆಲಸಿರುವ ಈ ಪ್ರಾಣಿಯ ವಾಸ್ತವ ಹೆಸರೇನು?
ಅ. ವಲ್ಲಭೀ ಬ. ಕೂವಾಲೇ
ಕ. ಕುಸ್‌ಕುಸ್ ಡ. ಒಪಾಸಂ

2. ಬಿಸಿ ಮರುಭೂಮಿಯ ಪ್ರಖ್ಯಾತ ಸಸ್ಯ ‘ಕ್ಯಾಕ್ಟಸ್’ (ಕಳ್ಳಿಗಿಡ) ಚಿತ್ರ-2ರಲ್ಲಿದೆ. ತೀವ್ರ ಜಲಾಭಾವದ ಮರುಭೂಮಿಗಳಲ್ಲೂ ಕಳ್ಳಿಗಿಡಗಳು ಬೆಳೆಯುತ್ತವೆ, ದೀರ್ಘಕಾಲ ಬಾಳುತ್ತವೆ. ಕಳ್ಳಿಗಿಡಗಳ ಯಾವ ವಿಶೇಷ ಗುಣ ಈ ಸಾಮರ್ಥ್ಯಕ್ಕೆ ಕಾರಣ?
ಅ. ಅವಕ್ಕೆ ಎಲೆಗಳಿಲ್ಲ
ಬ. ಅವು ಭಾಷ್ಪ ವಿಸರ್ಜಿಸುವುದಿಲ್ಲ
ಕ. ಸಿಕ್ಕಿದಾಗಲೇ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಶಕ್ತಿ ಅವಕ್ಕಿದೆ
ಡ. ಅವು ಅಂತರ್ಜಲಕ್ಕೇ ಬೇರುಗಳನ್ನು ಇಳಿಸುತ್ತವೆ

3. ವಿಶಿಷ್ಟ ರೂಪದ ಭಾರಿ ಕೊಕ್ಕಿನ ವಿಖ್ಯಾತ ಪಕ್ಷಿ ಚಿತ್ರ-3ರಲ್ಲಿದೆ. ಈ ಹಕ್ಕಿಯ ಹೆಸರೇನು ಗೊತ್ತೇ?
ಅ. ಹಾರ್ನ್‌ಬಿಲ್ ಬ. ಟೌಕಾನ್
ಕ. ಮಕಾ  ಡ. ಮರಕುಟುಕ

4. ಚಿತ್ರ-ವಿಚಿತ್ರ ಆಕಾರಗಳ, ಆಕರ್ಷಕ ಬಣ್ಣಗಳ ಸಸ್ಯೋತ್ಪನ್ನಗಳ ಒಂದು ವಿಶಿಷ್ಟ ವಿಧ ಚಿತ್ರ-4 ರಲ್ಲಿದೆ. ಈ ಸೃಷ್ಟಿಯನ್ನು ಗುರುತಿಸಿ:
ಅ. ಬೀಜಗಳು ಬ. ಪರಾಗ ಕಣಗಳು
ಕ. ಹಣ್ಣುಗಳು ಡ. ಹೂ ಮೊಗ್ಗುಗಳು

5. ಪಾತರಗಿತ್ತಿ ಪ್ರಭೇದಗಳಲ್ಲೆಲ್ಲ ಅತಿ ವಿಶಿಷ್ಟವಾದ, ವಿಶ್ವಪ್ರಸಿದ್ಧವಾದ ‘ಮೋನಾರ್ಕ್ ಚಿಟ್ಟೆ’ಗಳ ಭಾರಿ ಸಮೂಹವೊಂದು ಚಿತ್ರ-5ರಲ್ಲಿದೆ. ಮೋನಾರ್ಕ್‌ಗಳ ಪ್ರಸಿದ್ಧಿಗೆ ಕಾರಣ ಏನು?
ಅ. ಅವು ವಲಸೆ ಪಯಣ ಕೈಗೊಳ್ಳುತ್ತವೆ
ಬ. ಅವುಗಳದು ಅತ್ಯಂತ ವರ್ಣಮಯ ಶರೀರ
ಕ. ಅವುಗಳದು ಬೃಹದ್ಗಾತ್ರ
ಡ. ಅವುಗಳದು ಅತ್ಯಂತ ದೀರ್ಘ ಆಯುಷ್ಯ

6. ಎಂಥ ಬಲಿಷ್ಠ ಶತ್ರುವನ್ನೂ ಹಿಮ್ಮೆಟ್ಟಿಸಬಲ್ಲ ರಕ್ಷಣಾ ಕವಚ ತೊಟ್ಟಿರುವ ಪ್ರಾಣಿ ಚಿತ್ರ-6ರಲ್ಲಿದೆ. ಈ ಪ್ರಾಣಿ ಯಾವುದು ಗೊತ್ತೇ?
ಅ. ಪ್ಯಾಂಗೋಲಿನ್ ಬ. ಆರ್ಮಡಿಲ್ಲೋ
ಕ. ಎಖಿಡ್ನಾ ಡ. ಮುಳ್ಳುಹಂದಿ

7. ಸಾಗರವಾಸಿ ಮತ್ಸ್ಯಗಳ ಗುಂಪೊಂದು ಚಿತ್ರ-7ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಸಾಗರವಾಸಿಗಳನ್ನೂ ಅವುಗಳ ಜೀವಿವರ್ಗಗಳನ್ನೂ ಸರಿಹೊಂದಿಸಿ:
1. ತಿಮಿಂಗಿಲ       ಅ. ಮೃದ್ವಂಗಿ
2. ನಾಟಿಲಸ್       ಬ. ಸರೀಸೃಪ
3. ಕೆಲ್ಪ್             ಕ. ಮೀನು
4. ಲೆದರ್‌ಬ್ಯಾಕ್    ಡ. ಸ್ತನಿ
5. ಮೋಲಾ         ಇ. ಸಸ್ಯ

8. ನಮ್ಮ ರಾಷ್ಟ್ರದ ಒಂದು ವಿಶಿಷ್ಟ ಪ್ರಸಿದ್ಧ ವನ್ಯಜೀವಿ ‘ಭಾರತೀಯ ಗೇಂಡಾ’ ಚಿತ್ರ-8ರಲ್ಲಿದೆ. ನಮ್ಮ ದೇಶದ ಯಾವ ಅಭಯಾರಣ್ಯ/ ರಾಷ್ಟ್ರೀಯ ಉದ್ಯಾನದಲ್ಲಿ ಈ ಪ್ರಾಣಿಯನ್ನು ನೋಡಬಹುದು?
ಅ. ನಾಗರಹೊಳೆ ಅಭಯಾರಣ್ಯ
ಬ. ಬಂಡೀಪುರ ವನ್ಯಧಾಮ
ಕ. ಖಾಜಿರಂಗಾ ರಾಷ್ಟ್ರೀಯ ಉದ್ಯಾನ
ಡ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ
ಇ. ಗಿರ್ ಅಭಯಾರಣ್ಯ

9. ‘ಎತ್ತರ ಮತ್ತು ಕಾಂಡದ ಸುತ್ತಳತೆ’ ಎರಡರಲ್ಲೂ ಗರಿಷ್ಠ ಅಳತೆಯ ವಿಶ್ವದಾಖಲೆಗಳನ್ನು ಸೃಷ್ಟಿಸಿರುವ ಪ್ರಖ್ಯಾತ ವೃಕ್ಷವಿಧ ಚಿತ್ರ-9ರಲ್ಲಿದೆ. ‘ರೆಡ್‌ವುಡ್ಸ್’ ಎಂದೇ ಹೆಸರಾಗಿರುವ ಈ ವಿದೇಶೀ ವೃಕ್ಷಗಳನ್ನು ಜೀವಂತ ನೇರ ನೋಡಲು ಯಾವ ದೇಶಕ್ಕೆ ಹೋಗಬೇಕು?
ಅ. ಬ್ರೆಜಿಲ್ ಬ. ಯು.ಎಸ್.ಎ.
ಕ. ರಷಿಯಾ ಡ. ಇಂಗ್ಲೆಂಡ್
ಇ. ಜರ್ಮನಿ ಈ. ಥಾಯ್ಲಾಂಡ್

10. ಪ್ರಖ್ಯಾತ ವಾನರ ‘ಚಿಂಪಾಂಜಿ’ ಚಿತ್ರ-10 ರಲ್ಲಿದೆ. ಈ ಕೆಳಗಿನ ವಿಶೇಷ ಲಕ್ಷಣಗಳ ವಾನರರನ್ನು ಹೆಸರಿಸಬಲ್ಲಿರಾ?
ಅ. ನಮ್ಮ ಅತ್ಯಂತ ನಿಕಟ ಸಂಬಂಧಿ
ಬ. ಭಾರತದಲ್ಲೂ ಕಾಣಬಹುದಾದ ವಾನರ ವಿಧ
ಕ. ಅತ್ಯಂತ ಬಲಶಾಲಿ ವಾನರ
ಡ. ಚಿಂಪಾಂಜಿಯನ್ನೇ ಹೋಲುವ ವಾನರ
ಇ. ಕೆಂಪು ಬಣ್ಣದ ವಾನರ

ಉತ್ತರಗಳು
1. ಬ-ಕೂಡಲೇ
2. ಕ-ಜಲಸಂಗ್ರಹ ಶಕ್ತಿ
3. ಅ-ಹಾರ್ನ್‌ಬಿಲ್
4. ಬ-ಪರಾಗ ಕಣಗಳು
5. ಅ-ವಲಸೆ ಪಯಣ
6. ಡ-ಮುಳ್ಳುಹಂದಿ
7. 1-ಡ; 2-ಅ; 3-ಇ; 4-ಬ; 5-ಕ
8. ಕ-ಖಾಜಿರಂಗಾ ರಾಷ್ಟ್ರೀಯ ಉದ್ಯಾನ
9. ಬ-ಯು.ಎಸ್.ಎ.
10. ಅ-ಚಿಂಪಾಂಜಿ; ಬ-ಗಿಬ್ಬನ್; ಕ-ಗೊರಿಲ್ಲ;
ಡ-ಬೋನೋಬೋ; ಇ-ಒರಾಂಗೊಟಾನ್. 
-ಎನ್. ವಾಸುದೇವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.