ಗಿಡುಗನ ಕೈಯಲ್ಲಿ
ಸರ್ವಾಧಿಕಾರ ರೋಸಿ
ಹೋಯಿತು ಪಕ್ಷಿಸಂಕುಲ
ನಡೆಯಿತೆಲ್ಲಡೆ ಪ್ರತಿಭಟನೆ
ಕಿತ್ತುಕೊಂಡವು ಗಿಡುಗನ
ಕೈಯಿಂದ ಅಧಿಕಾರ
ಪಕ್ಷಿತಂತ್ರದಾ ಅಡಿಯಲ್ಲಿ
ನಡೆಯಿತು ಚುನಾವಣೆ
ಚುರುಕಾಗಿ
ಕಾಗೆ ಕೋಗಿಲೆ ಗಿಳಿರಾಣಿ
ಮುಖ್ಯ ಅಭ್ಯರ್ಥಿಗಳಾಗಿ
ನಿಂತವು ಚುನಾವಣೆ ಕಣದಲ್ಲಿ
ಮತದಾನ, ಮತ ಎಣಿಕೆ
ಮುಗಿದಾಯ್ತು, ಗಿಳಿರಾಣಿ
ಮುಖ್ಯಮಂತ್ರಿ ಆಗಿತ್ತು
ವಿರೋಧ ಪಕ್ಷದ ನಾಯಕನಾಗಿ
ಕಾಗೆ ಕೂಗಿತು `ಕಾವ್ ಕಾವ್~,
ಗಿಡುಗನ ಅಟ್ಟಿದವು ಬೆಟ್ಟಕ್ಕೆ
`ಗಿಡ ಉಳಿಸಿ ಬೆಳೆಸಿ~ ಮಂತ್ರದ
ಘೋಷಣೆಯೊಂದಿಗೆ
ಸರಕಾರ ನಡೆಯಿತು ಸೊಗಸಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.