ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಎಂದರೆ ಅದೊಂದು ಆಕರ್ಷಣೆ. ಕಾಡು, ಪಕ್ಷಿ, ಪ್ರಾಣಿ, ರೈತ, ಕಾರ್ಮಿಕ, ಪರಿಸರದ ಕುರಿತ ಕಾಳಜಿ ಅವರ ಬರಹಗಳಲ್ಲಿದೆ. ಈ ನಿಟ್ಟಿನಲ್ಲಿ, ಅವರ ಬದುಕು ಮತ್ತು ಬರಹಗಳನ್ನು ಕಣ್ಮುಂದೆ ತರುವ ಪ್ರಯತ್ನವನ್ನು ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮಾಡಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿರುವ ತೇಜಸ್ವಿ ಪ್ರತಿಷ್ಠಾನದ ಕೇಂದ್ರ, ಚಿಕ್ಕಮಗಳೂರಿನಿಂದ 47 ಕಿ.ಮೀ. ಧರ್ಮಸ್ಥಳದಿಂದ 42 ಕಿ.ಮೀ. ದೂರದಲ್ಲಿದೆ. ಕರಾವಳಿ ಕಡೆಯಿಂದ ಬರುವವರು ಚಾರ್ಮಾಡಿ ಘಾಟಿ ಏರಿದ ಕೂಡಲೇ ಪ್ರತಿಷ್ಠಾನ ಎದುರಾಗುತ್ತದೆ. ಒಳ ಹೋಗಿ ನೋಡಿದರೆ ತೇಜಸ್ವಿ ಲೋಕವೊಂದು ತೆರೆದುಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.