ADVERTISEMENT

ಕುವೆಂಪು ಪದ ಸೃಷ್ಟಿ: ಕಾಡದಟು

ಜಿ.ಕೃಷ್ಣಪ್ಪ
Published 27 ಜುಲೈ 2024, 23:30 IST
Last Updated 27 ಜುಲೈ 2024, 23:30 IST
<div class="paragraphs"><p>ಕುವೆಂಪು</p></div>

ಕುವೆಂಪು

   
ಕಾಡದಟು

ಕಾಡದಟು (ನಾ). ಕಾಡುತನದ ಪರಾಕ್ರಮ; ನಾಗರಿಕವಲ್ಲದ ಶೌರ್ಯ

(ಕಾಡು + ಅದಟು)

ADVERTISEMENT

ಆಮಂತ್ರಣ ಮುಗಿದ ಮಾರನೆಯ ಬೆಳಗ್ಗೆ ರಾಮಲಕ್ಷ್ಮಣರು ಸುಗ್ರೀವ ಮತ್ತು ಅವನ ಸಂಗಡಿಗರನ್ನು ನಿರೀಕ್ಷಿಸುತ್ತ ಕುಳಿತಿರುತ್ತಾರೆ. ಹೊತ್ತೇರುತ್ತಿದ್ದರೂ ಆ ವಾನರರು ಬಾರದಿರಲು ಲಕ್ಷ್ಮಣನು ಅಣ್ಣನಿಗೆ ಹೇಳುವ ಮಾತಿನಲ್ಲಿ ಕುವೆಂಪು ಅವರು ವಾನರರದು ನಾಗರಿಕವಲ್ಲದ ಶೌರ್ಯ, ಅದು ಕಾಡುತನದ ಪರಾಕ್ರಮ ಎಂದು ತಿಳಿಸಲು ‘ಕಾಡದಟು’ ಪದ ಸೃಷ್ಟಿಸಿ ಪ್ರಯೋಗಿಸಿದ್ದಾರೆ.

ಇನ್ನೆಗಂ

ಹೆರರ ಕಯ್ ಹಾರೈಸದೆಮ್ಮಾರ್ಪನಾಂ ನೆಮ್ಮಿ

ಮುಂಬರಿದ ನಮಗೀಗಳೇಕೀ ಕಪಿಧ್ವಜರ

ಕಾಡದಟಿನೊಂದು ಹಂಗು? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.